Wednesday, July 6, 2022

Latest Posts

ಕೊರೋನಾ| ಉನ್ನತ ತಂಡಗಳಿಂದ ಸ್ಥಳೀಯ ಆಡಳಿತಕ್ಕೆ ನೆರವು: ರಾಜ್ಯಕ್ಕೆ ಕೇಂದ್ರ ತಂಡ

ಹೊಸದಿಲ್ಲಿ: ಕೊರೋನಾ ವಿರುದ್ಧ ಹೋರಾಡುವ ದಿಸೆಯಲ್ಲಿ ಸ್ಥಳೀಯ ಆಡಳಿತದ ಜತೆ ಕೈ ಜೋಡಿಸಲು ಕೇಂದ್ರ ಸರ್ಕಾರವು ಕರ್ನಾಟಕ ಸೇರಿ ೧೫ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಉನ್ನತ ತಂಡಗಳನ್ನು ನಿಯೋಜಿಸಿದೆ.

ಹೆಚ್ಚು ಕೊರೋನಾ ಪ್ರಕರಣ ದೃಢಪಟ್ಟ ೫೦ಕ್ಕೂ ಹೆಚ್ಚು ಜಿಲ್ಲೆ ಗಳಿಗೆ ಕೇಂದ್ರದ ಉನ್ನತ ತಂಡ ತೆರಳಿದ್ದು, ಕರ್ನಾಟಕದ ನಾಲ್ಕು ಜಿಲ್ಲೆಗಳಲ್ಲಿ ತಂಡವು ಸ್ಥಳೀಯ ಆಡಳಿತಕ್ಕೆ ನೆರವು ನೀಡಲಿದೆ.

ಕೊರೋನಾ ತಪಾಸಣೆ ಕಡಿಮೆ ಇರುವ, ೧೦ ಲಕ್ಷ ಮಂದಿಗೆ ಕಡಿಮೆ ತಪಾಸಣೆ ಸೌಲಭ್ಯ ಇರುವ, ದಿನೇದಿನೆ ಸೋಂಕು ಜಾಸ್ತಿ ಆಗುತ್ತಿರುವ ಜಿಲ್ಲೆಗಳಲ್ಲಿ ಸರ್ವರೀತಿಯಲ್ಲೂ ಕೇಂದ್ರದ ತಂಡಗಳು ನೆರವು ನೀಡಲಿವೆ.

ಕೇಂದ್ರ ಸರ್ಕಾರದ ಉನ್ನತ ತಂಡಗಳು ಆಯಾ ಸ್ಥಳೀಯ ಆಡಳಿತದ ಜತೆಗೂಡಿ ಮುಂದಿನ ಎರಡು ತಿಂಗಳಲ್ಲಿ ಕೊರೋನಾ ಸಂಪೂರ್ಣ ನಿಯಂತ್ರಣಗೊಳಿಸುವ ದಿಸೆಯಲ್ಲಿ ಕ್ಷಿಪ್ರವಾಗಿ ಕಾರ್ಯನಿರ್ವಹಿಸಲಿವೆ.

ಕೊರೋನಾ ಸಂಪೂರ್ಣವಾಗಿ ನಿಯಂತ್ರಿಸಲು  ಕಂಟೈನ್‌ಮೆಂಟ್ ವಲಯಗಳಿಗೆ ಕೇಂದ್ರದ ತಂಡಗಳನ್ನು ನಿಯೋಜಿಸಿದ್ದು, ಆಯಾ ಸ್ಥಳೀಯ ಆಡಳಿತಗಳು ನಿತ್ಯ ತಂಡಗಳ ಜತೆ ಸಂಪರ್ಕ ದಲ್ಲಿರಬೇಕು ಹಾಗೂ ಸಹಕಾರ ನೀಡಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.

ಹೀಗಿರುತ್ತದೆ ತಂಡ: ಪ್ರತಿ ತಂಡದಲ್ಲೂ ಮೂವರು ಸದಸ್ಯರಿರುತ್ತಾರೆ. ಅವರಲ್ಲಿ ಇಬ್ಬರು ಸಾರ್ವಜನಿಕ ಆರೋಗ್ಯ ತಜ್ಞರಿದ್ದು, ಒಬ್ಬ ಜಂಟಿ ಕಾರ್ಯದರ್ಶಿ ಶ್ರೇಣಿಯ ನೋಡಲ್ ಅಧಿಕಾರಿ ಇರುತ್ತಾರೆ. ಇಬ್ಬರು ಆರೋಗ್ಯ ತಜ್ಞರು ವೈದ್ಯಕೀಯ ಕ್ರಮಗಳ ಕುರಿತು ಮಾರ್ಗದರ್ಶನ, ನೆರವು ನೀಡಿದರೆ, ನೋಡಲ್ ಅಧಿಕಾರಿಯು ಸ್ಥಳೀಯ ಮಟ್ಟದಲ್ಲಿ ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳಲು ಸಹಕಾರ ನೀಡಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss