Tuesday, September 22, 2020
Tuesday, September 22, 2020

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕೊರೋನಾ ಎಫೆಕ್ಟ್: ಬದಲಿ ಉದ್ಯೋಗ ಶುರು ಮಾಡಿದ ಯಕ್ಷಗಾನ ಕಲಾವಿದರು!

sharing is caring...!

ಹರೀಶ್ ಕುಲ್ಕುಂದ
ಮಂಗಳೂರು: ಭಾಗವತ ವೆಜಿಟೇಬಲ್ಸ್… ಶ್ರೀ ದುರ್ಗಾ ಹೋಂ ಪ್ರೊಡಕ್ಟ್.. ಹೆಬ್ಬಾರ್ ಕ್ಯಾಟರರ್ಸ್.. ಮಲ್ಪೆ ಫಿಶ್ ತಾಜಾ ಮೀನು.. ಅರೆ! ಇದೇನಿದು ಅಂಗಡಿ, ಉದ್ಯಮ ಸಂಸ್ಥೆಗಳ ಹೆಸರು ಎಂದು ಆಲೋಚಿಸುತ್ತಿದ್ದೀರಾ? ಇವೆಲ್ಲವೂ ಕೊರೋನಾ ಲಾಕ್‌ಡೌನ್ ಬಳಿಕ ಯಕ್ಷಗಾನ ಕಲಾವಿದರು ಆರಂಭಿಸಿದ ಹೊಸ ಉದ್ಯೋಗ. ಕೊರೋನಾ ಲಾಕ್‌ಡೌನ್‌ನಿಂದ ಯಕ್ಷಗಾನ ಪ್ರದರ್ಶನಗಳು ರದ್ದುಗೊಂಡ ಬಳಿಕ ಸಂಕಷ್ಟಕ್ಕೆ ಒಳಗಾದ ಕಲಾವಿದರು ಈಗ ಬದಲಿ ಕೆಲಸದತ್ತ ಹೊರಳಿದ್ದಾರೆ. ಬದಲಾದ ಪರಿಸ್ಥಿತಿಗೆ ಬೇರೆ ಉದ್ಯೋಗ ಅನಿವಾರ್ಯ ಎಂದು ಮನಗಂಡು ಹಲವಾರು ಮಂದಿ ಯಕ್ಷಗಾನ ಕಲಾವಿದರು ಅಂಗಡಿ,  ಹೋಂ ಪ್ರೊಡಕ್ಟ್, ಕ್ಯಾಟರಿಂಗ್, ಮೀನು ವ್ಯಾಪಾರ ಸಹಿತ ವಿವಿಧ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಕಡಂಬಳಿತ್ತಾಯರ ಕ್ಯಾಟರಿಂಗ್
ಕಟೀಲು ಮೇಳದ ಮದ್ದಳೆಗಾರ ಮುರಾರಿ ಕಡಂಬಳಿತ್ತಾಯ ಅವರು ಹವ್ಯಾಸಿ ಕಲಾವಿದ ಜಯಪ್ರಕಾಶ್ ಹೆಬ್ಬಾರ್ ಅವರ ಜತೆ ಸೇರಿ ವಾರದ ಹಿಂದೆ ಹೆಬ್ಬಾರ್ ಕ್ಯಾಟರರ್ಸ್ ಸಂಸ್ಥೆ ಆರಂಭಿಸಿದ್ದಾರೆ. ಆರಂಭಿಕವಾಗಿ ಸಣ್ಣ ಮಟ್ಟದಲ್ಲಿ ಮಂಗಳೂರಿನ ಬಜಾಲ್‌ನಲ್ಲಿ ಕ್ಯಾಟರಿಂಗ್ ಸೇವೆ ಶುರು ಮಾಡಿದ್ದಾರೆ. ಚೆಂಡೆ ಬಡಿಯುತ್ತಿದ್ದ ಕೈಯಲ್ಲಿ ಸೌಟು ಹಿಡಿದು ಪಾಕ ತಜ್ಞರಾಗಿ ಬದಲಾಗಿದ್ದಾರೆ.
ಭಾಗವತರ ತರಕಾರಿ ಅಂಗಡಿ
ಬಪ್ಪನಾಡು ಮೇಳದ ಭಾಗವತ ಹೆಬ್ರಿ ಗಣೇಶ್ ಅವರು ಹೆಬ್ರಿ ಬ್ರಹ್ಮಾವರ ರಸ್ತೆಯಲ್ಲಿರುವ ಮೂರುದಾರಿ ರಸ್ತೆಯ ಸಮೀಪ ತರಕಾರಿ ಅಂಗಡಿ ಱಭಾಗವತ ವೆಜಿಟೇಬಲ್ಸ್ ೞ ಆರಂಭಿಸಿದ್ದಾರೆ. ಕೊರೋನಾ ಲಾಕ್‌ಡೌನ್‌ನಿಂದ ಯಕ್ಷಗಾನ ಪ್ರದರ್ಶನ ಸ್ಥಗಿತಗೊಂಡ ಬಳಿಕ ಏನಾದರೂ ಸ್ವಂತ ಉದ್ಯೋಗ ಮಾಡಬೇಕು ಎಂದು ಯೋಚಿಸಿ ತರಕಾರಿ ಮಾರಾಟ ಮಾಡುತ್ತಿದ್ದಾರೆ.
ಮದ್ದಳೆಗಾರರ ಎಣ್ಣೆ ತಿಂಡಿ
ಬಪ್ಪನಾಡು ಮೇಳದ ಮದ್ದಳೆಗಾರ ಗಣೇಶ್ ಭಟ್ ನೆಕ್ಕರೆಮೂಲೆ ಅವರು “ಶ್ರೀ ದುರ್ಗಾ ಹೋಂ ಪ್ರೊಡಕ್ಟ್‌” ಶುರು ಮಾಡಿದ್ದಾರೆ. ಪತ್ನಿಯ ಜತೆಗೂಡಿ ಮನೆಯಲ್ಲೇ ಎಣ್ಣೆ ತಿಂಡಿಗಳು, ಸ್ವೀಟ್ಸ್, ಸಾರು, ಸಾಂಬಾರು, ಉಪ್ಪಿನಕಾಯಿ ಹುಡಿ ಸಹಿತ ೧೫ಕ್ಕೂ ಹೆಚ್ಚು ಬಗೆಯ ಉತ್ಪನ್ನ ತಯಾರಿಸಿ ಕಳೆದ ಎರಡು ತಿಂಗಳಿನಿಂದ ಮಾರಾಟ ನಡೆಸುತ್ತಿದ್ದಾರೆ.
ಸ್ತ್ರೀ ವೇಷಧಾರಿಯ ಮೀನು ವ್ಯಾಪಾರ
ಕಟೀಲು ಮೇಳದ ಸ್ತ್ರೀ ವೇಷಧಾರಿ ರಾಜೇಶ್ ನಿಟ್ಟೆ ಅವರು ಆ.೩ ಸೋಮವಾರದಿಂದ ಮೀನು ವ್ಯಾಪಾರಕ್ಕೆ ಕೈ ಹಾಕಿದ್ದಾರೆ. ಮಲ್ಪೆಯಿಂದ ಹಸಿಮೀನು ತಂದು ಬಜ್ಪೆ ಸುಂಕದಕಟ್ಟೆ ಪ್ರದೇಶದಲ್ಲಿ ಮಾರಾಟ ಮಾಡುವ ಉದ್ದೇಶ ಅವರದ್ದು. ಮೊದಲ ದಿನ ಅವರಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇವಿಷ್ಟು ಕೆಲ ಸ್ಯಾಂಪಲ್‌ಗಳು. ಇನ್ನೂ ಹಲವಾರು ಮಂದಿ ಯಕ್ಷಗಾನ ಕಲಾವಿದರು ಪ್ರದರ್ಶನ ಸ್ಥಗಿತಗೊಂಡ ಕಾರಣ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಬದಲಿ ಉದ್ಯೋಗ ಕಂಡುಕೊಂಡಿದ್ದಾರೆ. ಕೆಲವರು ಅಡುಗೆ ಕೆಲಸ,  ಪುರೋಹಿತ ವೃತ್ತಿ, ಎಲ್‌ಐಸಿ ಏಜೆಂಟ್ ಕೆಲಸ ನಿರ್ವಹಿಸುತ್ತಿದ್ದಾರೆ.

ನನ್ನ ಗೆಳೆಯನ ಜತೆ ಸೇರಿ ಮೀನು ವ್ಯಾಪಾರ ಆರಂಭಿಸಿದ್ದೇನೆ
ಆಟ ಸ್ಥಗಿತಗೊಂಡ ಬಳಿಕ ಬೇರೆ ಉದ್ಯೋಗ ಅನಿವಾರ್ಯವಾಯಿತು. ಈ ಹಿನ್ನೆಲೆಯಲ್ಲಿ ಕಡಿಮೆ ಬಂಡವಾಳ ಸಾಕು ಎಂಬ ನೆಲೆಯಲ್ಲಿ ದೈಹಿಕ ಶಿಕ್ಷಣ ನಿರ್ದೇಶಕನಾಗಿರುವ ನನ್ನ ಗೆಳೆಯನ ಜತೆ ಸೇರಿ ಮೀನು ವ್ಯಾಪಾರ ಆರಂಭಿಸಿದ್ದೇನೆ. ಬಜ್ಪೆ ಸುಂಕದಕಟ್ಟೆ ಪ್ರದೇಶದಲ್ಲಿ ಪರಿಚಯಸ್ಥರು ಹೆಚ್ಚಿನ ಸಂಖ್ಯೆಯಲ್ಲಿರುವ ಕಾರಣ ಇಲ್ಲಿ ವ್ಯಾಪಾರ ಪ್ರಾರಂಭಿಸಿದ್ದೇನೆ. ಮೇಳ ಆರಂಭವಾದ ಬಳಿಕವೂ ವ್ಯಾಪಾರ ಮುಂದುವರೆಸುವ ಇಚ್ಚೆಯಿದೆ
                                                                                                         ರಾಜೇಶ್ ನಿಟ್ಟೆ, ಸ್ತ್ರೀ ವೇಷಧಾರಿ
ಕ್ಯಾಟರಿಂಗ್ ಸೇವೆ ನೀಡುತ್ತೇವೆ

ಸದ್ಯಕ್ಕೆ ಯಕ್ಷಗಾನ ಪ್ರದರ್ಶನ ಆರಂಭವಾಗುವ ಸಾಧ್ಯತೆ ಇಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಅಡುಗೆ ತಯಾರಿಸಿ ಪೂರೈಸುವ ಸಂಸ್ಥೆ ವಾರದ ಹಿಂದೆ ಆರಂಭಿಸಿದ್ದೇನೆ. ಈಗಾಗಲೇ ಎರಡು ಕಾರ್ಯಕ್ರಮಕ್ಕೆ ಆಹಾರ ಪೂರೈಸಿದ್ದೇನೆ. ಸದ್ಯ ಮಂಗಳೂರಿನಿಂದ ೨೦ ಕಿ.ಮೀ. ವ್ಯಾಪ್ತಿಗೆ ಕ್ಯಾಟರಿಂಗ್ ಸೇವೆ ನೀಡುತ್ತೇವೆ. ಅಗತ್ಯವಿದ್ದಲ್ಲಿ ೩೫ ಕಿ.ಮೀವರೆಗೂ ಆಗಮಿಸಲು ಸಿದ್ಧ
                                                                                          ಮುರಾರಿ ಕಡಂಬಳಿತ್ತಾಯ, ಮದ್ದಳೆಗಾರರು

ತಿಂಡಿ ತಿನಿಸು ತಯಾರಿಸಿ ಮಾರಾಟ
ಕೊರೋನಾ ಲಾಕ್‌ಡೌನ್‌ನಿಂದ ಯಕ್ಷಗಾನ ಸ್ಥಗಿತಗೊಂಡ ಬಳಿಕ ಬೇರೆ ದಾರಿ ಕಾಣದೆ ತಿಂಡಿ ತಿನಿಸು ತಯಾರಿಸಿ ಮಾರಾಟ ಆರಂಭಿಸಿದ್ದೇನೆ. ಸದ್ಯಕ್ಕೆ ಮುಲ್ಕಿಯ ನಮ್ಮ ಮನೆಯಲ್ಲೇ ತಯಾರಿಸಿ ಪಕ್ಕದ ಅಂಗಡಿ, ಮನೆಗಳಿಗೆ ಮಾರಾಟ ನಡೆಸುತ್ತಿದ್ದೇವೆ. ಮೇಳ ಶುರುವಾದ ಬಳಿಕವೂ ವ್ಯಾಪಾರ ಮುಂದುವರೆಸುವ ಆಲೋಚನೆಯಿದೆ
                                                                                           ಗಣೇಶ್ ಭಟ್ ನೆಕ್ಕರೆಮೂಲೆ, ಮದ್ದಳೆಗಾರರು

ತರಕಾರಿ ಅಂಗಡಿ ಆರಂಭಿಸಿದ್ದೇನೆ
ಯಕ್ಷಗಾನ ಪ್ರದರ್ಶನ ಸ್ಥಗಿತಗೊಂಡ ಬಳಿಕ ಪರ್ಯಾಯ ಉದ್ಯೋಗ ಆರಂಭಿಸಬೇಕು ಎಂದು ಆಲೋಚಿಸಿ ಸಹ ಕಲಾವಿದ ಸಾಣೂರು ಗಣೇಶ್ ಅವರ ಸಲಹೆಯಂತೆ, ಬಾಸುಮ ಕೊಡಗು ಅವರ ಸಹಕಾರದೊಂದಿಗೆ ಮನೆ ಪಕ್ಕ ೧೫ ದಿನದ ಹಿಂದೆ ತರಕಾರಿ ಅಂಗಡಿ ಆರಂಭಿಸಿದ್ದೇನೆ. ನನ್ನ ಬಳಿ ಇದ್ದ ಕಾರು ಮಾರಾಟ ನಡೆಸಿ, ತರಕಾರಿ ಅಂಗಡಿಗೆ ಬಂಡವಾಳ ಹಾಕಿದ್ದೇನೆ. ಕುಟುಂಬಸ್ಥರು ಸಹಕಾರ ನೀಡುತ್ತಿದ್ದಾರೆ. ಮೇಳ ಶುರುವಾದರೂ ವ್ಯವಹಾರ ನಿಲ್ಲಿಸುವುದಿಲ್ಲ.
                                                                                                           ಹೆಬ್ರಿ ಗಣೇಶ್, ಭಾಗವತರು

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕಾಸರಗೋಡು ಜಿಲ್ಲೆಯಲ್ಲಿ ಅನ್ ಲಾಕ್-4 ಜಾರಿಗೆ: ಸಹಜ ಸ್ಥಿತಿಯತ್ತ ಜನಜೀವನ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯ ಆತಂಕ ನೆಲೆಗೊಂಡಿರುವಂತೆಯೇ ಇನ್ನಷ್ಟು ಸಡಿಲಿಕೆ ಜಾರಿಗೆ ಬರುವುದರೊಂದಿಗೆ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ದೇಶದಲ್ಲಿ ಅನ್ ಲಾಕ್-4 ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 100...

Don't Miss

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...
error: Content is protected !!