Monday, August 15, 2022

Latest Posts

ಕೊರೋನಾ ಎಫೆಕ್ಟ್ ಹಂಪಿ ವಿಶ್ವವಿದ್ಯಾಲಯಕ್ಕೆ ರಜೆ

ಬಳ್ಳಾರಿ: ಹಂಪಿ ಕನ್ನಡ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಆ.3 ರಿಂದ 7ರವರೆಗೆ ರಜೆ ಘೊಷಿಸಲಾಗಿದೆ ಎಂದು ವಿ.ವಿ.ಕುಲಸಚಿವರಾದ ಪ್ರೊ.ಎ.ಸುಬ್ಬಣ್ಣ ರೈ ಅವರು ತಿಳಿಸಿದ್ದಾರೆ. ವಿಶ್ವವಿದ್ಯಾಲಯದಲ್ಲಿ ಕೆಲಸ‌ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಹಿತದೃಷ್ಟಿಯಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ರಜೆ‌‌ ದಿನಗಳಲ್ಲಿ ಆಯಾ ಅದ್ಯಯನ, ಆಡಳಿತ ವಿಭಾಗದ ಮುಖ್ಯಸ್ಥರು, ನಿರ್ಧೇಶಕರು, ಸಂಯೋಜನಾಧಿಕಾರಿಗಳು, ನಿಲಯ ಪಾಲಕರು, ಆಸ್ಪತ್ರೆಯ ವೈದ್ಯರು, ಅಧಿಕಾರಿಗಳು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ದೂರವಾಣಿ ಅಥವಾ ಇ- ಮೇಲ್ ಗಳ‌ ಮೂಲಕ ಸಂಪರ್ಕಿಸಬಹುದು. ಆದರೇ, ಕೇಂದ್ರ ಸ್ಥಾನವನ್ನು ಬಿಡುವಂತಿಲ್ಲ. ಅಗತ್ಯವಿದ್ದಾಗ ವಿವಿಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss