ಕೊರೋನಾ ಔಷಧಿ ಬಳಕೆಯಲ್ಲೂ ಎಡ- ಬಲ ಪಂಥ !

0
290

ವಾಷಿಂಗ್ಟನ್: ಕೊರೋನಾ ಔಷಧಿ ಬಳಕೆ ವಿಚಾರದಲ್ಲಿ ಅಮೆರಿಕ ಮಿತ್ರಕೂಟ ಹಾಗೂ ಚೀನಾ ನಡುವೆ ಭಾರಿ ಕಂದಕ ಉಂಟಾಗಿದೆ.

ಮಲೇರಿಯಾ ಸೋಂಕಿಗೆ ಬಳಸುವಂತಹ ಹೈಡ್ರಾಕ್ಸಿ ಕ್ಲೋರೋಕ್ವೀನ್ ಔಷಧಿಯನ್ನು ಅಮೆರಿಕ ಮತ್ತು ಮಿತ್ರ ದೇಶಗಳು ವ್ಯಾಪಕವಾಗಿ ಬಳಸುತ್ತಿದ್ದರೆ, ಇದರಿಂದ ಸೋಂಕು ನಿವಾರಣೆ ಅಸಾಧ್ಯ ಎಂದು ಚೀನಾ ಹಾಗೂ ಮಿತ್ರದೇಶಗಳು ಹೇಳಿವೆ.

ಈಗಾಗಲೇ ಲಕ್ಷಾಂತರ ಹೈಡ್ರಾಕ್ಸಿ ಕ್ಲೋರೋಕ್ವೀನ್ ಗುಳಿಗೆ, ಭಾರತದಿಂದ ಅಮೆರಿಕ ಮತ್ತು ಬ್ರೆಜಿಲ್ ದೇಶಗಳಿಗೆ ರವಾನೆಯಾಗಿದ್ದು ,ಈ ದೇಶಗಳಲ್ಲಿ ಇದನ್ನೇ ಸೋಂಕಿತರಿಗೆ ನೀಡಲಾಗುತ್ತಿದೆ.ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡಾ ಈ ಔಷಧಿಯನ್ನು ಬಳಸುತ್ತಿದ್ದಾರೆ.

ಆದರೆ ಈ ಔಷಧಿಯಿಂದ ಕೊರೋನಾ ಸೋಂಕು ನಿವಾರಣೆ ಸಾಧ್ಯವಿಲ್ಲ ಎಂದು ಚೀನಾ ದೇಶದ ವೈದ್ಯರು ಹೇಳಿದ್ದು, ಉತ್ತರ ಕೊರಿಯಾ ಹಾಗೂ ಇನ್ನಿತರ ದೇಶಗಳಲ್ಲಿ ಹೈಡ್ರಾಕ್ಸಿ ಕ್ಲೋರೋಕ್ವೀನ್ ಗುಳಿಗೆ ಬಳಕೆಯಾಗುತ್ತಿಲ್ಲ. ಭಾರತದಲ್ಲಿಯೂ ಈಗ ಈ ಔಷಧಿಯನ್ನು ವ್ಯಾಪಕವಾಗಿ ಬಳಸಲಾಗುತ್ತಿಲ್ಲ.

ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಇದುವರೆಗೆ ಕೊರೋನಾ ಸೋಂಕು ನಿವಾರಣೆಗೆ ಸೂಕ್ತ ಔಷಧ ಯಾವುದೆಂಬುದನ್ನು ಹೇಳಲು ಸಾಧ್ಯವಾಗಿಲ್ಲ. ಭಾರತವೂ ಸೇರಿದಂತೆ ಬ್ರಿಟನ್, ಜಪಾನ್, ಚೀನಾ ಮತ್ತು ಆಸ್ಟ್ರೇಲಿಯಾ ದೇಶಗಳು ಇನ್ನೂ ಪೂರ್ವಭಾವಿ ವೈದ್ಯಕೀಯ ಪರೀಕ್ಷೆಗಳಲ್ಲಿ ತೊಡಗಿದ್ದು ಖಚಿತ ಔಷಧಿ ದೊರೆಯದೆ ಪರಿತಪಿಸುವಂತಾಗಿದೆ.

LEAVE A REPLY

Please enter your comment!
Please enter your name here