Saturday, July 2, 2022

Latest Posts

ಕೊರೋನಾ ಔಷಧಿ ಸಿಗುವವರೆಗೆ ಮಾಸ್ಕ್ ಧರಿಸಬೇಕು ಹಾಗೂ 2 ಮೀ. ಅಂತರ ಕಾಯ್ದುಕೊಳ್ಳಬೇಕು: ಪ್ರಧಾನಿ ಮೋದಿ

ಹೊಸದಿಲ್ಲಿ: ಕೊರೋನಾ ಸೋಂಕಿಗೆ ಔಷಧಿ ಸಿಗುವವರೆಗೂ ಎಲ್ಲರೂ 2 ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಹಾಗೂ ಎಲ್ಲರೂ ಮಾಸ್ಕ್ ಧರಿಸಲೇಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ವಲಸೆ ಕಾರ್ಮಿಕರಿಗೆ ಉದ್ಯೋಗಾವಕಾಶ ನೀಡುವ ನಿಟ್ಟಿನಲ್ಲಿ ಆತ್ಮ ನಿರ್ಭಾರ್ ರೋಜ್ಘಾರ್ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಕೊರೋನಾ ಸೋಂಕಿನಿಂದ ಭಾರತ ಶೀಘ್ರದಲ್ಲಿ ಯಶಸ್ಸು ಕಾಣಲಿದೆ. ಯಶಸ್ಸಿಗೆ ದೇಶದ ಜನತೆ ಒಟ್ಟಾಗಿ ಪ್ರಯತ್ನಿಸಬೇಕು ಎಂದರು.

ಜೀವನದಲ್ಲಿ ನಾವೆಲ್ಲರೂ ಸಾಕಷ್ಟು ತೊಂದರೆಗಳನ್ನು ನೋಡಿದ್ದೇವೆ ಆದರೆ ಈರೀತಿಯಾದಂತಹ ಸಮಸ್ಯೆ ಬರಲಿದೆ ಎಂದು ಯಾರೂ ಊಹಿಸಿರಲಿಲ್ಲ. ಕೊರೋನಾ ಸೋಂಕಿನಿಂದ ಮುಕ್ತಿ ಪಡೆಯುವವರೆಗೂ ನಾವೆಲ್ಲರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಹಾಗೂ 2 ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿದೆ ಎಂದರು.

ಕೆಲಸದ ಶಕ್ತಿ ಏನೆಂಬುದನ್ನು ನಿಮ್ಮೊಂದಿಗೆ ನಾನು ಅರಿತಿದ್ದೇನೆ. ಪ್ರಧಾನ ಮಂತ್ರಿ ಗರೋಬ್ ಕಲ್ಯಾಣ್ ರೋಜ್ಘಾರ್ ಅಭಿಯಾನ  ಕೆಲಸದ ಶಕ್ತಿಯನ್ನೇ ಆಧರಿಸಿದೆ. ಈ ಶಕ್ತಿಯನ್ನೇ ಆಧರಿಸಿದೆ. ಈ ಶಕ್ತಿಯು ಆತ್ಮ ನಿರ್ಭಾರ್ ಉತ್ತರ ಪ್ರದೇಶ ರೋಜ್ಘಾರ್ ಅಭಿಯಾನಕ್ಕೆ ಸ್ಪೂರ್ತಿ ನೀಡಿದೆ ಎಂದು ಅವರು ಹೇಳಿದ್ದಾರೆ.

ಉತ್ತರಪ್ರದೇಶ ರಾಜ್ಯ ರೀತಿಯಲ್ಲಿಯೇ ಇತರೆ ರಾಜ್ಯಗಳೂ ಕೂಡ ಇದೇ ರೀತಿಯ ಯೋಜನೆಗಳನ್ನು ತರಲಿದೆ ಎಂಬ ವಿಶ್ವಾಸ ನನಗಿದೆ. ಈ ಕೊರೋನಾ ಬಿಕ್ಕಟ್ಟಿನಲ್ಲಿ ಉತ್ತರ ಪ್ರದೇಶ ರಾಜ್ಯ ಧೈರ್ಯ ಮತ್ತು ಮನೋಧರ್ಮವನ್ನು ತೋರಿದೆ.

ಉತ್ತರ ಪ್ರದೇಶ ಯಶಸ್ಸು ಸಾಧಿಸಿದ್ದು, ಕೊರೋನಾ ವಿರುದ್ಧ ಹೋರಾಡಿ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಅದ್ಭುತವಾಗಿದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss