ಬಂಟ್ವಾಳ: ಕೊರೋನಾ ಮಾಹಾಮಾರಿಗೆ ತಾಲೂಕಿನಲ್ಲಿ ಎರಡನೇ ಜೀವ ಬಲಿಯಾಗಿರುವ ಹಿನ್ನೆಲೆಯಲ್ಲಿ ಎನ್ಐಟಿಕೆಯಲ್ಲಿ ಕ್ವಾರಂಟೈನ್ನಲ್ಲಿರುವವರ ದ್ವಿತೀಯ ಸಂಪರ್ಕ ಹೊಂದಿರುವವರ ಮಾದರಿ ಸಂಗ್ರಹ ಕಾರ್ಯ ಗುರುವಾರ ಆರೋಗ್ಯ ಇಲಾಖೆಯ ವಿಶೇಷ ತಂಡದಿಂದ ಕಾರ್ಯ ನಡೆಯಿತು.
ಕೊರೋನ ಸೋಂಕಿನಿಂದ ಮೃತಪಟ್ಟ ಮಹಿಳೆ ಮತ್ತು ಇಬ್ಬರಲ್ಲಿ ಪಾಸಿಟಿವ್ ಕಾಣಿಸಿಕೊಂಡ ಮನೆ ಕಂಪೌಂಡಿನ ಪಕ್ಕದ ಕಂಪೌಂಡಿನಲ್ಲಿ ವಾಸ್ತವ್ಯವಿರುವ ಮನೆಮಂದಿಯ ಹಾಗೂ ಕ್ವಾರಂಟೇನ್ ನಲ್ಲಿರುವ ವೈದ್ಯರ ಪತ್ನಿಯ ಸಹಿತ ಕೆಲವರ ಮಾದರಿಯನ್ನು ಪರೀಕ್ಷೆಗಾಗಿ ಈ ವಿಶೇಷ ತಂಡ ಸಂಗ್ರಹಿಸಿತು. ಈ ನಡುವೆ ಪುರಸಭಾ ವ್ಯಾಪ್ತಿಯಲ್ಲಿ ಶುಚಿತ್ವ ಕಾರ್ಯದಲ್ಲಿ ನಿರತರಾಗಿರುವ ಪೌರಕಾರ್ಮಿಕರನ್ನು ಕೂಡ ಪರಿಸರಾಧಿಕಾರಿ ಯಾಸ್ಮೀನ್ ಅವರು ಆರೋಗ್ಯ ತಪಾಸಣೆ ನಡೆಸಿದರು.