Thursday, August 11, 2022

Latest Posts

ಕೊರೋನಾ ಕರ್ತವ್ಯ ನಿರತ ರಾಜ್ಯದ ‘ಸರ್ಕಾರಿ ನೌಕರ’ರಿಗೆ ರೂ.30 ಲಕ್ಷ ವಿಮಾ ಪರಿಹಾರ ಘೋಷಿಸಿದ ರಾಜ್ಯ ಸರ್ಕಾರ

ಬೆಂಗಳೂರು : ರಾಜ್ಯದ ಎಲ್ಲಾ ಇಲಾಖೆಗಳ ಎಲ್ಲಾ ವೃಂದದ ಸರ್ಕಾರಿ ನೌಕರರು ಕೊರೋನಾ ಕರ್ತವ್ಯಕ್ಕೆ ಹಾಜರಾಗಿ, ಒಂದು ವೇಳೆ ಕೊರೋನಾ ಸೋಂಕು ತಗುಲಿ ನಿಧನರಾದ ಸಂದರ್ಭದಲ್ಲಿ, ಅಂತಹ ಎಲ್ಲರಿಗೂ ರೂ.30 ಲಕ್ಷ ವಿಮಾ ಪರಿಹಾರ ಮೊತ್ತವನ್ನು ಪಡೆಯಲು ಅರ್ಹರಾಗಿರುವುದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿದೆ.
ಕೊರೋನಾ ಕರ್ತವ್ಯ ನಿರತ ವಾರಿಯರ್ಸ್ ಗಳಿಗೆ ಮಾತ್ರ ಕೋವಿಡ್-19 ಸೋಂಕು ತಗುಲಿ ಮೃತಪಟ್ಟರೇ ಮಾತ್ರವೇ ಕೊರೋನಾ ವಿಮಾ ಪರಿಹಾರ ಮೊತ್ತ ಸಿಗಲಿದೆ ಎನ್ನಲಾಗುತ್ತಿತ್ತು. ಆದ್ರೇ.. ಈ ನಿಯಮ ಬದಲಾವಣೆ ಮಾಡಿರುವಂತ ರಾಜ್ಯ ಸರ್ಕಾರ, ಕೋವಿಡ್-19 ಕರ್ತವ್ಯ ನಿರತ ರಾಜ್ಯದ ಎಲ್ಲಾ ಇಲಾಖೆಗಳ ಎಲ್ಲಾ ವೃಂದದ ಸರ್ಕಾರಿ ನೌಕರರು ಸೋಂಕಿನಿಂದ ನಿಧನರಾದ ಸಂದರ್ಭದಲ್ಲಿ ರೂ.30 ಲಕ್ಷ ವಿಮಾ ಪರಿಹಾರ ಮೊತ್ತವನ್ನು ಪಡೆಯಲು ಅರ್ಹರಾಗಿದ್ದಾರೆ ಎಂಬುದಾಗಿ ಆದೇಶಿಸಿದೆ.
ಈ ಕುರಿತಂತೆ ಆರ್ಥಿಕ ಇಲಾಖೆಯ ವಿಶೇಷಾಧಿಕಾರಿ(ಜಿ.ಪಂ) ಮತ್ತು ಪದನಿಮಿತ್ತ ಸರ್ಕಾರದ ಉಪ ಕಾರ್ಯದರ್ಶಿ ಪುರುಷೋತ್ತಮ್ ಸಿಂಗ್ ಬಿ ಹೆಚ್ ಆದೇಶ ಹೊರಡಿಸಿದ್ದು. ಕೋವಿಡ್-19 ಕೆಲಸಕ್ಕೆ ನಿಯೋಜನೆಗೊಳ್ಳುವ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಎಲ್ಲಾ ವೃಂದದ ಸರ್ಕಾರಿ ನೌಕರರು ಮತ್ತು ಅವರ ಕುಟುಂಬದವರಿಗೆ ಮನೋಸ್ಥೈರ್ಯ ತುಂಬಲು, ಸರ್ಕಾರದ ವತಿಯಿಂದ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಸರ್ಕಾರಿ ನೌಕರರು ಕೋವಿಡ್-19 ರೋಗದಿಂದ ಮೃತರಾದಲ್ಲಿ ರೂ.30 ಲಕ್ಷ ಪರಿಹಾರ ಒದಗಿಸಲಾಗುವುದು ಎಂಬುದಾಗಿ ತಿಳಿಸಿದ್ದಾರೆ.
ಸರ್ಕಾರಿ ನೌಕರರು ಕೋವಿಡ್-19 ಕೆಲಸದಲ್ಲಿ ಪಾಲ್ಗೊಂಡಿರುವ ಸಮಯದಲ್ಲಿ ಕೋವಿಡ್ – 19 ಸಾಂಕ್ರಾಮಿಕ ರೋಗಕ್ಕೆ ಒಳಗಾದಲ್ಲಿ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸರ್ಕಾರದಿಂದ ಭರಿಸಲಾಗುವುದು ಎಂದು ಮಂಜೂರಾತಿ ನೀಡಿ ಆದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss