spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ಕಾಲದಲ್ಲೂ ಕಸುವು ನೀಡಿದ `ಮಹಿಳಾ ಮಾರುಕಟ್ಟೆ’

- Advertisement -Nitte

*ನಯನಾ ಎಸ್.

ಲಾಕ್‌ಡೌನ್ ಮತ್ತು ಲಾಕ್‌ಡೌನ್ ನಂತರದ ಬದುಕಲ್ಲಿ ಮಹಿಳೆಯರಿಗೆ ಮತ್ತು ಆ ಮೂಲಕ ಪೂರಕವಾಗಿ ಬದುಕಿನ ಬಂಡಿ ಸಾಗಿಸಲು ಜ್ಯೋತಿಯಾಗಿ ಬೆಳಗಿದ್ದು  ‘ಮಹಿಳಾ ಮಾರುಕಟ್ಟೆ (Ladies Market)’. ಕನ್ನಡತಿ, ಈಗ ಮುಂಬೈನಲ್ಲಿ  ನೆಲೆಸಿರುವ ಅಪರ್ಣಾ ರಾವ್ facebookನಲ್ಲಿ  ಈ ಆಂದೋಲನವನ್ನು ಒಂದು ತಿಂಗಳ ಆರಂಭಿಸಿದ್ದಾರೆ. ಉತ್ಪಾದಕಿಯರು-ಕೊಳ್ಳುವವರ ನಡುವೆ ಕೊಂಡಿಯಾಗಿ ಮಹಿಳಾ ಮಾರುಕಟ್ಟೆ (Ladies Market) ನಡೆಸುತ್ತಿರುವ ಕಾರ್ಯ ಶ್ಲಾಘನೀಯ. ಯೋಜನೆ ಎಷ್ಟು  ಜನಪ್ರಿಯವಾಗಿದೆ ಎಂದರೆ ಆರಂಭವಾದ ಒಂದು ತಿಂಗಳ ಅವಧಿಯಲ್ಲಿ ೭೦೦೦ಕ್ಕೂ ಅಧಿಕ ಮಹಿಳೆಯರು ಗುಂಪಿನ ಸದಸ್ಯೆಯರಾದರು!

ಫೇಸ್‌ಬುಕ್ ಅಕೌಂಟ್ ಮೂಲಕ ಕನ್ನಡದಲ್ಲಿ ಮಹಿಳಾ ಮಾರುಕಟ್ಟೆ ಎಂದು ಟೈಪಿಸಿ ಸದಸ್ಯರಾಗಬಹುದು.

ಮಹಿಳಾ ಮಾರುಕಟ್ಟೆ  ಮೂಲಕ ವನಿತೆಯರು ತಾವು ಉತ್ಪಾದಿಸಿದ ಯಾವುದೇ ಉತ್ಪನ್ನವನ್ನು ಅಂದರೆ ಕಾಡುಜೇನುತುಪ್ಪ, ಬೆಲ್ಲದ ಉಂಡೆ, ಸೀಗೆಕಾಯಿ ಪುಡಿ, ಎಣ್ಣೆ, ಹೋಮ್‌ಮೇಡ್ ಚಾಕಲೇಟ್, ಬಟ್ಟೆ, ಬ್ಯಾಗ್‌ಗಳು, ಸೋಪ್‌ಗಳು, ನಾನಾ ರೀತಿಯ ಪುಡಿಗಳು, ಕರಕುಶಲ ವಸ್ತುಗಳು, ಕೃತಕಆಭರಣಗಳು, ಆರತಿ ತಟ್ಟೆಗಳು, ಮನೆಯಲ್ಲೇ ತಯಾರಿಸಿದ ಚಕ್ಕುಲಿ, ಕೋಡುಬಳೆ, ಹಲಸಿನ ಚಿಪ್ಸ್/ಹಪ್ಪಳ, ಅಡಕೆ ಹಾಳೆತಟ್ಟೆ, ಚಟ್ನಿಪುಡಿ, ಸಂಡಿಗೆ, ಮಾಸ್ಕ್‌ಗಳು, ಮರುಬಳಕೆಯ ಕಾಟನ್‌ಸ್ಯಾನಿಟರಿ ಪ್ಯಾಡ್‌ಗಳು, ಸೋಪ್‌ಗಳು ಸೇರಿದಂತೆ ಬಳಸುವ ಯಾವುದೇ ಉತ್ಪನ್ನಗಳನ್ನು ಫೇಸ್‌ಬುಕ್‌ನ ಮಹಿಳಾ ಮಾರುಕಟ್ಟೆಯ ಮೂಲಕ ಮಾರಬಹುದು. ಕೊಳ್ಳುವ ಆಸಕ್ತರೂ ಸಹ ಸಂಪರ್ಕಿಸಬಹುದು. ಅಂದರೆ ನಿಮಗೆ ಉತ್ತಮ ಸಾವಯವ ಬೆಲ್ಲದ ಪುಡಿ ಅಗತ್ಯ ಇದೆ ಅನ್ನಿ. ಆಗ ಈ ಪೇಜ್‌ನಲ್ಲಿ ನನಗೆ ಇಷ್ಟು ಕೆಜಿ ಬೆಲ್ಲದ ಪುಡಿ ಬೇಕಿತ್ತು ಎಂದು ಟೈಪಿಸಿದರೆ, ಅದನ್ನು ಹೊಂದಿರುವವರು ತಕ್ಷಣ ರೆಸ್ಪಾನ್ಸ್ ಮಾಡುತ್ತಾರೆ. ಸದೃಢವಾಗಿ ಕಾರ್ಯನಿರ್ವಸುತ್ತಿರುವ ನಿಮ್ಮ ಮನೆಯಲ್ಲಿನ ವಸ್ತುಗಳನ್ನು ಸಹ ಈ ಯೋಜನೆಯ ಮೂಲಕ ಮಾರಬಹುದು.

ಉತ್ಪನ್ನ ಮಾರಾಟ ಮಹಿಳೆಯರು ತಮ್ಮ ಉತ್ಪನ್ನದ ಫೋಟೊ ಹಾಕಿ ಬೆಲೆ ನಮೂದಿಸುವುದು ಕಡ್ಡಾಯ. ಉದಾಹರಣೆಗೆ ನೀವು ಉತ್ತಮ ದರ್ಜೆಯ ಗದ್ವಾಲ್ ಕಾಟನ್ ಸೀರೆಯನ್ನು ಮಾರುತ್ತಿದ್ದೀರಿ ಎಂದಿಟ್ಟುಕೊಂಡರೆ ಆ ಸೀರೆಯ ಫೋಟೊ, ಬೆಲೆ, ಅದರ ಉದ್ದ (ಮೀಟರ್ ಲೆಕ್ಕದಲ್ಲಿ), ಬ್ಲೌಸ್‌ಪೀಸ್ ವರವನ್ನು ನಮೂದಿಸಲೇ ಬೇಕು. ಹಾಗೆಯೇ ಹಲಸಿನಕಾಯಿ ಚಿಪ್ಸ್, ಸಂಡಿಗೆ, ಮಾರುತ್ತಿದ್ದರೆ ಅದರ ತೂಕ, ಬೆಲೆ ನಮೂದಿಸುವುದು ಕಡ್ಡಾಯ. ಕೆಲವು ಉತ್ಪನ್ನಗಳಲ್ಲಿ ಇನ್ನೂ ಒಂದೆರಡು ಹೆಚ್ಚಿನ ಮಾಹಿತಿ ಬೇಕಾಗುತ್ತದೆ. ಅಥವಾ ಕೊಂಡುಕೊಳ್ಳುವವರು ಅದನ್ನು ಕೇಳಿದರೆ ನೀಡುವುದು ಉಚಿತ.

‘ಮಹಿಳಾ ಮಾರುಕಟ್ಟೆ’ facebook ಪೇಜ್ ಇರುವುದು ಮಹಿಳೆಯರ ಅನುಕೂಲಕ್ಕಾಗಿ ಎಂಬುದು ಅಪರ್ಣಾ ರಾವ್ ಅವರದು ಖಡಕ್ ನಿಲುವು. ಹೀಗಾಗಿ ಮಹಿಳಾ ಮಾರುಕಟ್ಟೆಯ facebook ಪೇಜ್‌ನಲ್ಲಿ ಪುರುಷರ ಸದಸ್ಯತ್ವಕ್ಕೆ ಅವಕಾಶಲ್ಲ. ಹೆಂಡತಿ, ಸೋದರಿ, ತಾಯಿಯ ನೆರನಿಂದ ಮನೆಯಲ್ಲಿ ಹಲವು ಉತ್ಪನ್ನಗಳು ತಯಾರಾಗುತ್ತಿದ್ದರೆ ಅವಳ ಹೆಸರಿನ ಎಫ್‌ಬಿ ಅಕೌಂಟ್ ಮೂಲಕ ಸದಸ್ಯತ್ವ ಪಡೆಯಬಹುದು. ಯಾವುದೇ ಫೇಕ್ ಅಕೌಂಟ್‌ಗೆ ಅವಕಾಶವಿಲ್ಲ. ಹಾಗೆ ಪಡೆದರೂ ಬ್ಲಾಕ್ ಶಿಕ್ಷೆಗೆ ಒಳಪಡಿಸಲಾಗುತ್ತದೆ.

ಅಪರ್ಣಾ ರಾವ್ ಮಹಿಳೆಯರಿಗೆ ಸಹಕಾರ, ಬಲ ನೀಡಬೇಕೆಂಬ ಉದ್ದೇಶದಿಂದ ಅವರು  ‘ಮಹಿಳಾ ಮಾರುಕಟ್ಟೆ’ ಆರಂಭಿಸಿದ್ದಾರೆ. ಉತ್ಪನ್ನ ಮಾರಾಟ ಮಾಡುವವರಿಂದ ಅವರು ಯಾವುದೇ ರೀತಿಯ ನಗದನ್ನು ಅವರು ಪಡೆಯುತ್ತಿಲ್ಲ. ಮಹಿಳಾ ಸಬಲೀಕರಣದಲ್ಲಿ ಅವರದು ಮೌನ ದಿಟ್ಟ ಹೆಜ್ಜೆ. ಅಪರ್ಣಾ ರಾವ್ ಅವರು ಈ ಸೇವಾಕಾರ್ಯದಲ್ಲಿ ದಿನದ ಹೆಚ್ಚಿನ ಸಮಯವನ್ನು  ಮೀಸಲಾಗಿಟ್ಟಿದ್ದಾರೆ. ಪೇಜ್‌ನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಅವರು, ಸದಸ್ಯರ ಹಲವು ಸಮಸ್ಯೆಗಳಿಗೆ ಸ್ಪಂದಿಸಿ, ಉತ್ತರ ಕೊಟ್ಟು ವ್ಯಾಪಾರವನ್ನು ಸಲೀಸು ಮಾಡುತ್ತಾರೆ, ಮಾರ್ಗದರ್ಶನ ನೀಡುತ್ತಾರೆ. ಇನ್‌ಬಾಕ್ಸ್‌ನಲ್ಲೂ ಅವರಿಗೆ ಮಹಿಳೆಯರು ತಮ್ಮ ಪ್ರಶ್ನೆಗಳಿಗೆ ಉತ್ತರ ಪಡೆಯುತ್ತಾರೆ, ಮಾರುಕಟ್ಟೆ ಕಲ್ಪಿಸಿದ್ದಕ್ಕಾಗಿ ವಂದನೆ ಸಲ್ಲಿಸುತ್ತಾರೆ.

ಸದಸ್ಯೆಯರು ಉತ್ಪನ್ನಗಳನ್ನು ಕೋರಿಯರ್ ಅಥವಾ ಅಂಚೆ ಮೂಲಕ ಗ್ರಾಹಕರಿಗೆ ತಲುಪಿಸಬಹುದು. ಕೋರಿಯರ್/ಅಂಚೆ ವೆಚ್ಚವನ್ನು ಗ್ರಾಹಕರು ಅಂದರೆ ಕೊಂಡುಕೊಳ್ಳುವವರೇ ಭರಿಸಬೇಕಾಗುತ್ತದೆ. ಹಾಗಾಗಿ ಉತ್ಪನ್ನದ ದರದ ಜೊತೆಯಲ್ಲಿ ಸಾಗಣೆ ವೆಚ್ಚವನ್ನು ಕೊಂಡುಕೊಳ್ಳುವವರು ಒಟ್ಟಾಗಿ ನೀಡಬೇಕು. ಸದಸ್ಯೆಯರು ವಾಟ್ಸ್ ಆಪ್ ನಂ. ನೀಡಬಹುದು. ಆದರೆ, ಫೋನ್ ನಂ. ನೀಡುವಾಗ ಮತ್ತು ನಿರ್ವಹಣೆಯಲ್ಲಿ ಎಚ್ಚರಿಕೆ ಇರಲಿ. ಸುರಕ್ಷೆಗೆ ಪತಿ, ಸೋದರನ ಸಂಖ್ಯೆ ನೀಡುವುದು ಅನುಕೂಲಕರ ಎನಿಸಿದರೆ ಪಾಲಿಸಿ.

ಗ್ರಾಮೀಣ ಪ್ರದೇಶದ ಸದಸ್ಯೆಯರು ಉತ್ಪನ್ನಗಳನ್ನು ಗ್ರಾಹಕರಿಗೆ ಅಂಚೆಯಲ್ಲಿಯೇ ಕಳುಹಿಸಬಹುದು. ಸಾಮಾನ್ಯವಾಗಿ ಎಲ್ಲ ಹಳ್ಳಿಗಳಲ್ಲಿ ಅಂಚೆ ಕಚೇರಿಗಳಿರುತ್ತವೆ. ಇಲ್ಲ ಹತ್ತಿರದ ಹಳ್ಳಿಯಲ್ಲೂ ಕಚೇರಿ ಇರುತ್ತದೆ. ಅಂಚೆ ಕಚೇರಿ ಮೂಲಕ ವಹಿವಾಟು ನಡೆಸಿದರೆ ಅಂಚೆಕಚೇರಿಯ ವ್ಯವಹಾರಕ್ಕೂ ಕೊಡುಗೆ ನೀಡುತ್ತದೆ. ಸೇವೆಯ ನಿಟ್ಟಿನಲ್ಲಿ ಅಪರ್ಣಾ ರಾವ್ ಅಭಿನಂದನಾರ್ಹರು.


 

 

 

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss