Wednesday, July 6, 2022

Latest Posts

ಕಿರಿಕಿರಿ ಆದ್ರೆ ಕೊರೋನಾ ಕೆಮ್ಮಿನ ಟ್ಯೂನ್ ಗೆ ಹೇಳಿ ಗುಡ್ ಬೈ!

ಬೆಂಗಳೂರು: ದೇಶಾದ್ಯಂತ ಕೊರೋನಾ ವೈರಸ್ ಸೋಂಕು ಹೆಚ್ಚಾಗುತ್ತಿದಂತೆ ಜನರಲ್ಲಿ ಜಾಗೃತಿ ಮೂಡಿಸಲು ಕೊರೋನಾ ವೈರಸ್ ಕುರಿತಾದ ಮಾಹಿತಿಯನ್ನು ಕಾಲರ್ ಟ್ಯೂನ್ ಆಗಿ ಹಾಕುವಂತೆ ಟೆಲಿಕಾಂ ಇಲಾಖೆ ಆಪರೇಟರ್ ಗಳಿಗೆ ಸೂಚನೆ ನೀಡಿತ್ತು.

ಜನರಿಗೆ ವೈರಸ್ ಹರಡದಂತೆ ಮುಂಜಾಗ್ರತ ಕ್ರಮವನ್ನು ನೀಡುವ ಸಲುವಾಗಿ ನೂತನ 30 ಸೆಕೆಂಡ್ ಗಳ ಕಾಲರ್ ಟ್ಯೂನ್ ನೀಡಲಾಗಿದೆ. ಕೆಮ್ಮುವಾಗ ಅಥವಾ ಸೀನುವಾದ ಕರವಸ್ತ್ರದಿಂದ ಮುಖವನ್ನು ಮುಚ್ಚಿಕೊಳ್ಳಿ ಎಂಬ ಸಂದೇಶವನ್ನು ನೀಡುತ್ತಿತ್ತು. ಜನರಲ್ಲಿ ಜಾಗೃತಿ ಮೂಡಿಸಲು ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಈ ಕಾಲರ್ ಟ್ಯೂನ್ ಬಳಕೆಯಾಗುತ್ತಿದೆ.

ಆದರೆ ಈ ಕೊರೋನಾ ವೈರಸ್ ಸಂದೇಶದ ಟ್ಯೂನ್ ನಿಂದ ಜನರಿಗೆ ಕಿರಿಕಿರಿ ಉಂಟಾಗಿದ್ದು, ಈ ಸಂದೇಶವನ್ನು ತುರ್ತು ಪರಿಸ್ಥಿತಿಯಲ್ಲಿ ಕೇಳುವುದಕ್ಕೆ ಸಮಸ್ಯೆಯಾಗಿದೆ ಎಂಬ ಆರೋಪವನ್ನು ಜನರು ವ್ಯಕ್ತಪಡಿಸುತ್ತಿದ್ದಾರೆ.

ಈ ಕಾಲರ್ ಟ್ಯೂನ್ ಕೇಳದೇ ಇರುವುದು ಹೇಗೆ?

  • ನಿಮ್ಮ ಆಯ್ಕೆಯ ಸಂಖ್ಯೆಗೆ(1234567890) ಕರೆ ಮಾಡಿ
  • ಕೀ ಪ್ಯಾಡ್ ಮೂಲಕ # ಒತ್ತಿರಿ.
  • ಸಂದೇಶ ರದ್ದಾಗಿ, ನಿಮ್ಮ ಕರೆ ಕನೆಕ್ಟ್ ಆಗುತ್ತದೆ.

ಈ ಸುಲಭವಾದ ಒಂದು ಪ್ರಕ್ರಿಯೆ ಜನರಿಗೆ ತಮ್ಮ ತುರ್ತು ಸಮಯದಲ್ಲಿ ಸಹಾಯ ಮಾಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss