ಹೊಸದಿಲ್ಲಿ: ದೇಶದ ಆರ್ಥಿಕತೆ ಮೇಲೆ ಕೊರೋನಾ ಸೋಂಕು ಪರಿಣಾಮ ಬೀರಬಹುದಾದ ಸಾಧ್ಯತೆ ಕುರಿತು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪರಿಹಾರಕ್ಕಾಗಿ ಚಿಂತನೆ ನಡೆಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬುಧವಾರ ತಿಳಿಸಿದ್ದಾರೆ.
ಜತೆಗೆ ಸಾರ್ವಜನಿಕ ವಲಯ ಬ್ಯಾಂಕ್ ಗಳ ವಿಲೀನಗೊಳಿಸುವ ಪ್ರಕ್ರಿಯೆ ಇನ್ನು ಪ್ರಗತಿಯಲ್ಲಿರುವಾಗಲೇ, ಸರ್ಕಾರ 10 ಪ್ರಮುಖ ಬ್ಯಾಂಕ್ ವಿಲೀನ ಗೊಳಿಸಿತ್ತು. ಆದರೆ ಈ ಯೋಜನೆಯ ಬಗ್ಗೆ ಸರ್ಕಾರ ಎರಡನೇ ಪ್ರಶ್ನೆ ಉದ್ಭವಿಸುವ ಪ್ರಮೇಯವೇ ಇಲ್ಲದಿದ್ದು, ಕಾನೂನಾತ್ಮಕವಾಗಿ ಬ್ಯಾಂಕ್ ಗಳ ವಿಲೀನವಾಗಿತ್ತು ಎಂದು ಹೇಳಿದ್ದಾರೆ. ಇದೇ ವೇಳೆ ಆರ್ಥಿಕತೆ ಮೇಲೆ ಕೊರೋನಾ ಪರಿಣಾಮದ ಕುರಿತು ಸರ್ಕಾರ ನಿಗಾ ವಹಿಸುತ್ತಿದೆ ಎಂದು ತಿಳಿಸಿದ್ದಾರೆ.