spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, September 19, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ಚಿಕಿತ್ಸೆಗೆ ಶಿವಮೊಗ್ಗದಲ್ಲಿ ೨೨ ಖಾಸಗಿ ಆಸ್ಪತ್ರೆ ಗುರುತಿಸಿದ ಸರ್ಕಾರ

- Advertisement -Nitte

ಶಿವಮೊಗ್ಗ: ಕೊರೋನಾ ಸೋಂಕಿತರು ಇನ್ಮುಂದೆ ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆಯಬಹುದಾಗಿದ್ದು, ಸರ್ಕಾರ ಇದಕ್ಕಾಗಿ ಜಿಲ್ಲೆಯ 22 ಆಸ್ಪತ್ರೆಗಳನ್ನು ಗುರುತಿಸಿದೆ.
ಈ 22 ಆಸ್ಪತ್ರೆಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಇತ್ಯಾದಿ ವಿವರ ಒಳಗೊಂಡು ಆದೇಶ ಹೊರಡಿಸಿದೆ. ಇದರಲ್ಲಿ ಶಿವಮೊಗ್ಗದ 17, ಭದ್ರಾವತಿಯ 4 ಮತ್ತು ತೀರ್ಥಹಳ್ಳಿಯ ಒಂದು ಆಸ್ಪತ್ರೆಯನ್ನು ಗುರುತಿಸಲಾಗಿದೆ. ಈಗಾಗಲೇ ಸರ್ಕಾರ ಖಾಸಗಿ ಆಸ್ಪತ್ರೆಯಲ್ಲಿ ನೀಡಬಹುದಾಗಿದ್ದು, ಚಿಕಿತ್ಸೆಯ ವೆಚ್ಚವನ್ನು ಕೂಡಾ ನಿಗದಿಪಡಿಸಿದೆ. ಖಾಸಗಿ ಆಸ್ಪತ್ರೆಗಳು ಈ ದರಪಟ್ಟಿಯಂತೆ ಚಿಕಿತ್ಸೆ ನೀಡಬೇಕಾಗುತ್ತದೆ.
ಆರಂಭದಲ್ಲಿ ಶಿವಮೊಗ್ಗದ ಮೆಗ್ಗಾನ್‌ ಕೋವಿಡ್‌ ಆಸ್ಪತ್ರೆ ಎಂದು ಗುರುತಿಸಲಾಗಿತ್ತು. ಇಲ್ಲಿ ಮಾತ್ರ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಆ ಬಳಿಕ ಸರ್ಕಾರ ಖಾಸಗಿ ಆಸ್ಪತ್ರೆಗೂ ಅವಕಾಶ ನೀಡಲಾಗುವುದು ಎಂದು ತಿಳಿಸಿತು.
ಎಲ್ಲ ಆಸ್ಪತ್ರೆಗಳ ಮಾಲೀಕರು ಮತ್ತು ಮುಖ್ಯ ವೈದ್ಯರ ಸಭೆ ಶೀಘ್ರದಲ್ಲಿಯೇ ಕರೆಯಲಿದ್ದು, ಈ ಸಭೆಯಲ್ಲಿ ಸರ್ಕಾರದ ನೀತಿ ನಿಯಮ ತಿಳಿಸಲಾಗುತ್ತದೆ. ಯಾವ್ಯಾವ ಆಸ್ಪತ್ರೆಗಳಲ್ಲಿ ಏನೇನು ಸೌಲಭ್ಯ ಇದೆ ಎಂಬ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ. ಬಿ. ಶಿವಕುಮಾರ್‌  ತಿಳಿಸಿದರು. ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಬೇಕಾದಲ್ಲಿ ಒದಗಿಸಬೇಕಾದ ಸೌಲಭ್ಯಗಳ ಪಟ್ಟಿಯನ್ನು ನೀಡಿ, ಈ ಸೌಲಭ್ಯ ಒದಗಿಸಿಕೊಂಡಲ್ಲಿ ಮಾತ್ರ ಚಿಕಿತ್ಸೆ ನೀಡುವ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರ ಪಟ್ಟಿಮಾಡಿದ ಆಸ್ಪತ್ರೆಗಳು:

ಶಿವಮೊಗ್ಗ:

ನಂಜಪ್ಪ ಲೈಫ್‌​ಕೇರ್‌ (8182251166)

ಮಲ್ನಾಡ್‌ ಕ್ಯಾನ್ಸರ್‌ ಆಸ್ಪತ್ರೆ (8182246800)

ಸಹ್ಯಾದ್ರಿ ನಾರಾ​ಯಣ ಹೃದ​ಯಾ​ಲಯ (8182221588)

ಸುಬ್ಬಯ್ಯ ಆಸ್ಪತ್ರೆ (98440077203)

ಶ್ರೀ ಬಸ​ವೇ​ಶ್ವರ ಆಸ್ಪ​ತ್ರೆ (8182220535)

ರವಿ ಪಾಲಿ​ಕ್ಲಿನಿಕ್‌ ಮೆಟ​ರ್ನಿಟಿ ಅಯಂಡ್‌ ನರ್ಸಿಂಗ್‌ ಹೋಂ (8182223773)

ಮಲ್ನಾಡ್‌ ಇಎ​ನ್‌ಟಿ ಇನ್‌​ಸ್ಟಿ​ಟ್ಯೂಟ್‌ ಅಯಂಡ್‌ ರಿಸರ್ಚ್ ಸೆಂಟರ್‌ (8182226947)

ಎಸ್‌​ಕೆ​ಕೆ​ಎಂಟಿ ಶಂಕರ ಕಣ್ಣಿನ ಆಸ್ಪತ್ರೆ (8182222099)

ಸಾಗರ್‌ ನರ್ಸಿಂಗ್‌ ಹೋಂ ಮತ್ತು ಲೇಸರ್‌ ಸೆಂಟರ್‌ (8182224970)

ಸಿಂಧು ಯೂರಾ​ಲಜಿ ಆಸ್ಪತ್ರೆ (9243334524)

ಮ್ಯಾಕ್ಸ್‌ ಸೂಪರ್‌ ಸ್ಪೆಷಾ​ಲಿಟಿ ಆಸ್ಪತ್ರೆ (8182269400)

ಸರ್ಜಿ ಆಸ್ಪತ್ರೆ (8182405505)

ಸುಬ್ಬಯ್ಯ ಮೆಡಿ​ಕಲ್‌ ಕಾಲೇಜ್‌ ಹಾಸ್ಪಿ​ಟಲ್‌ ಅಯಂಡ್‌ ರಿಸರ್ಚ್ ಸೆಂಟರ್‌ (8182295604)

ಮೆಟ್ರೋ ಯುನೈ​ಟೆಡ್‌ ಹೆಲ್ತ್‌​ಕೇರ್‌ (8182270001)

ಕೊಟ್ಟೂ​ರೇ​ಶ್ವರ ಆಸ್ಪತ್ರೆ (9449400000)

ಯುನಿಟಿ ಸೆಂಟರ್‌ ಫಾರ್‌ ಅಡ್ವಾ​ನ್ಸ್‌ಡ್‌ ಪಿಡಿ​ಯಾಟ್ರಿಕ್‌ ಕೇರ್‌ (9739963933)

ಮಲ್ಲಿ​ಕಾ​ರ್ಜುನ ನರ್ಸಿಂಗ್‌ ಹೋಂ (9448123580).

ಭದ್ರಾವತಿ:

ಭದ್ರಾ​ವ​ತಿ ಭದ್ರಾ ನರ್ಸಿಂಗ್‌ ಹೋಂ (8282266483)

ನಯನ ಆಸ್ಪತ್ರೆ(9448884774)

ದುರ್ಗ ನರ್ಸಿಂಗ್‌ ಹೋಂ (9449836352)

ನಿರ್ಮಲ ಆಸ್ಪ​ತ್ರೆ (9449551275).

ತೀರ್ಥ​ಹ​ಳ್ಳಿ:

ಅನು​ರಾಧ ನರ್ಸಿಂಗ್‌ ಹೋಂ (8181228238

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss