ಕೊರೋನಾ| ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿಯಾದ ಬಂಟ್ವಾಳದ ಮಹಿಳೆಯ ಪುತ್ರಿ ಡಿಸ್ಚಾರ್ಜ್

0
123

ಮಂಗಳೂರು: ಕೊರೋನಾಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿಯಾದ ಬಂಟ್ವಾಳ ಕಸಬಾ ಗ್ರಾಮದ 50 ವರ್ಷದ ಮಹಿಳೆಯ ಪುತ್ರಿ 16 ವರ್ಷದ ಬಾಲಕಿ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದು, ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಗೆ ಭೇಟಿ ನೀಡಿದ್ದ ಬಂಟ್ವಾಳ ಕಸಬಾದ 50 ವರ್ಷದ ಮಹಿಳೆ ಏ. 19ರಂದು ಕೊರೋನಾ ದೃಢಗೊಂಡು ಅದೇ ದಿನ ಮೃತಪಟ್ಟಿದ್ದರು. ಈಕೆಯ ಪುತ್ರಿಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, 12ನೇ ದಿನದ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿತ್ತು. ಮೇ 6ರಂದು ಇವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗಿದ್ದು, ಬುಧವಾರ ಮನೆಗೆ ತೆರಳಿದ್ದಾರೆ.
ಮಂಗಳೂರಿನ ಬೋಳೂರಿನ ಇಬ್ಬರೂ, ಬುಧವಾರ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಒಂದೇ ದಿನ ಮೂರು ಮಂದಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾದಂತಾಗಿದೆ. ಈ ಮೂಲಕ ಇದುವರೆಗೆ ಜಿಲ್ಲಯಲ್ಲಿ ಒಟ್ಟು 20 ಮಂದಿ ಬಿಡುಗಡೆಯಾದಂತಾಗಿದೆ.

LEAVE A REPLY

Please enter your comment!
Please enter your name here