Sunday, August 14, 2022

Latest Posts

ಕೊರೋನಾ ದಿಂದ ಗುಣಮುಖರಾದ ಅರ್ಜುನ್ ಸರ್ಜಾ ಪುತ್ರಿ, ಪ್ರಾರ್ಥಿಸಿದ ಎಲ್ಲರಿಗೂ ನನ್ನ ಧನ್ಯವಾದ ಎಂದರು!

ಕೆಲವು ದಿನಗಳ ಹಿಂದೆ ಕೊರೋನಾ ವೈರಸ್ ಸೋಂಕಿಗೆ ಒಳಗಾಗಿದ್ದ ಅರ್ಜುನ್ ಸರ್ಜಾ ಅವರ ಪುತ್ರಿ, ನಟಿ ಐಶ್ವರ್ಯಾ ಸರ್ಜಾ ಅವರು ಕೋವಿಡ್ ೧೯ರಿಂದ ಗುಣಮುಖರಾಗಿದ್ದಾರೆ.

ತಮಗೆ ಕೊರೋನಾ ವೈರಸ್ ಪಾಸಿಟಿವ್ ಬಂದಿರುವ ಕುರಿತು ಐಶ್ವರ್ಯಾ ಅರ್ಜುನ್, ಜುಲೈ ೨೦ರಂದು ಮಾಹಿತಿ ನೀಡಿದ್ದರು. ಈಗ ಅದರಿಂದ ಚೇತರಿಸಿಕೊಂಡಿದ್ದು, ಪುನಃ ಮಾಡಿರುವ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂಬ ಖುಷಿಯನ್ನು ಹಂಚಿಕೊಂಡಿದ್ದಾರೆ.

ನನ್ನ ಎಲ್ಲ ಹಿತೈಷಿಗಳಿಗೆ ಹೇಳಲು ಬಯಸುವುದೇನೆಂದರೆ ದೇವರ ದಯೆಯಿಂದ ನಾನು ಈಗ ಕೊರೊನಾ ವೈರಸ್ ತಪಾಸಣೆಯಲ್ಲಿ ನೆಗೆಟಿವ್ ವರದಿ ಪಡೆದಿದ್ದೇನೆ. ನನ್ನ ಕುರಿತು ಯೋಚಿಸಿದ, ಪ್ರಾರ್ಥಿಸಿದ ಎಲ್ಲರಿಗೂ ‘ನ್ಯವಾದಗಳು. ಈ ಪಿಡುಗು ಇನ್ನೂ ದೂರವಾಗಿಲ್ಲ. ಹೀಗಾಗಿ ಪ್ರತಿಯೊಬ್ಬರ ಬಗ್ಗೆ ಕಾಳಜಿ ವಹಿಸಿ. ಸುರಕ್ಷಿತರಾಗಿರಿ ಎಂದು ಐಶ್ವರ್ಯಾ ಹೇಳಿದ್ದಾರೆ.

ಇತ್ತೀಚಿಗೆ ಕೊರೊನಾ ಪರೀಕ್ಷೆಗೆ ಒಳಗಾಗಿದ್ದೆ. ಕೊರೋನಾ ಪಾಸಿಟಿವ್ ಬಂದಿದೆ. ನಾನೀಗ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದವರು ದಯವಿಟ್ಟು ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಐಶ್ವರ್ಯಾ ತಮ್ಮ ವರದಿ ಬಂದಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss