Monday, July 4, 2022

Latest Posts

ಕೊರೋನಾ ನಡುವೆ ಶಬರಿಮಲೆ ಅಯ್ಯಪ್ಪನ ಪೂಜೆ ಆರಂಭ: ಭಕ್ತರ ಪ್ರವೇಶಕ್ಕೆ ನಿರ್ಬಂಧ

ತಿರುವನಂತಪುರಂ: ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಭಾನುವಾರ ತೆರೆಯಲಾಗಿದ್ದು, ತಿಂಗಳಲ್ಲಿ 5 ದಿನಗಳ ಪೂಜೆ ಸಲ್ಲಿಸಲು ಅರ್ಚಕರು ಸಿದ್ಧತೆಗಳನ್ನು ನಡೆಸುತ್ತಿದ್ದಾರೆ.

ಮಲಯಾಳಿ ಪಂಚಾಂಗದ ಅನುಸಾರ ಚಿಂಗಮ್ ತಿಂಗಳು(ಆಗಸ್ಟ್) ನಲ್ಲಿ ಅಯ್ಯಪ್ಪ ಸ್ವಾಮಿಗೆ 5 ದಿನಗಳ ವಿಶೇಷ ಪೂಜೆ ಪ್ರಾರಂಭವಾಗಿದ್ದು, ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಮಾಸಿಕ 5 ದಿನಗಳ ಪೂಜೆಯ ಬಳಿಕ ಆ.21 ರಂದು ದೇವಸ್ಥಾನವನ್ನು ಮುಚ್ಚಲಾಗುತ್ತದೆ. ಈ ಹಿಂದೆಯೇ ಮಾತನಾಡಿದ ತಿರುವಾಂಕೂರು ದೇವಸ್ಥಾನದ ಅಧ್ಯಕ್ಷ ಎನ್. ವಾಸು ಅವರು, ಶಬರಿಮಲ ವಾರ್ಷಿಕ ತೀರ್ಥಯಾತ್ರೆಯು ನವೆಂಬರ್ 16ರಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದರು.

ದಶಕಗಳಿಂದ ಈ ಸಂಪ್ರದಾಯಗಳು ನಡೆಯುತ್ತಿದ್ದು, ಸರ್ಕಾರ ಹಾಗೂ ತಿರುವಾಂಕೂರು ದೇವಸ್ಥಾನ ಮಂಡಳಿ ಮುಂಜಾಗ್ರತಾ ಕ್ರಮಗಳು ಹಾಗೂ ಮಿತಿಗಳನ್ನೊಳಗೊಂಡು ಭಕ್ತರ ದರ್ಶನಕ್ಕೆ ಅವಕಾಶ ನೀಡುವ ಚಿಂತನೆ ನಡೆಸುತ್ತಿದೆ ಎಂದು ತಿಳಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss