spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ನಡುವೆ ಇಂದಿನಿಂದ ದೇಶಿಯ ವಿಮಾನ ಹಾರಾಟ ಆರಂಭ

- Advertisement -Nitte

ಬೆಂಗಳೂರು:  ದೇಶದಲ್ಲಿ ಲಾಕ್ ಡೌನ್ ಸಡಿಲಿಕೆ ಬೆನ್ನಲ್ಲೆ ಇಂದಿನಿಂದ ದೇಶಿಯ ವಿಮಾನ ಸಂಚಾರ ಪ್ರಾರಂಭವಾಗಿದೆ.

ದೇಶಾದ್ಯಂತ ವಿಮಾನಯಾನ ಆರಂಭವಾಗಿದ್ದು, ಇಂಡಿಗೋ, ಏರ್ ಏಷಿಯಾ, ಏರ್ ಇಂಡಿಯಾ, ಟ್ರೂಜೆಟ್ ಕಂಪನಿಗಳು ವಿಮಾನ ಸಂಚಾರ ನಡೆಯಲಿದೆ. ಬೆಂಗಳೂರು- ಮೈಸೂರು- ಬೆಳಗಾವಿ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳಿಗೆ ವಿಮಾನ ಸಂಚಾರ ಪ್ರಾರಂಭವಾಗಲಿದೆ.

ಮಂಗಳವಾರ ಹೊರತುಪಡಿಸಿ, ಉಳಿದ ದಿನಗಳಲ್ಲಿ ವಿಮಾನ ಸಂಚಾರ ನಡೆಯಲಿದ್ದು, ಇಂದು ಸೋಮವಾರ ಸಂಜೆ 4.30ಕ್ಕೆ ಬೆಂಗಳೂರಿನಿಂದ ಮೈಸೂರಿಗೆ ವಿಮಾನ ಸಂಚರಿಸಲಿದ್ದು, ಸಂಜೆ 5.30ಕ್ಕೆ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣ ತಲುಪಲಿದೆ. ಹಾಗೂ ಸಂಜೆ 6.15ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ವಿಮಾನ ಹಾರಾಟ ನಡೆಸಲಿದ್ದು 7.15ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣ ತಲುಪಲಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಇಂದು 6 ವಿಮಾನಗಳು ಸಂಚರಿಸಲಿದ್ದು, ಈಗಾಗಲೇ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಈ ಕುರಿತು ಸರ್ಕಾರ ಹೊಸ ಮಾರ್ಗ ಸೂಚಿಯನ್ನು ನೀಡಿದೆ.

  • ಮಾಸ್ಕ್, ಹಾಗೂ ಸ್ಯಾನಿಟೈಸರ್ ಗಳನ್ನು ಕಡ್ಡಾಯವಾಗಿ ಬಳಸಬೇಕು.
  • ವಿಮಾನ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಗಾಗಬೇಕು.
  • 14ದಿನ ಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕು.
  • ವಿದೇಶಗಳಿಂದ ಬಂದ ಪ್ರಯಾಣಿಕರು 7 ದಿನ ಪ್ರತ್ಯೇಕ ಕ್ವಾರಂಟೈನ್ ನಲ್ಲಿ ಇರಬೇಕು. ಬಳಿಕ 7 ದಿನ ತಮ್ಮ ಮನೆಗಳಲ್ಲಿ ಕ್ವಾರಂಟೇನ್ ನಲ್ಲಿರಬೇಕು.

ತಮಿಳುನಾಡಿನ ಚೆನ್ನೈ ನಲ್ಲಿ ಕೊರೋನಾ ಸೋಂಕಿನಿಂದ ನಲುಗಿ ಹೋಗಿದ್ದು, ಸೋಂಕು ನಿಯಂತ್ರಣಕ್ಕೆ ತರಲು ಸರ್ಕಾರ ವಿಮಾನ ಸಂಚಾರ ನಡೆಸದಿರಲು ತೀರ್ಮಾನಿಸಿದೆ. ಈ ನಡುವೆ ಅಂಫಾನ್ ಚಂಡಮಾರುತದಿಂದ ತತ್ತರಿಸಿದ್ದ ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ ರಾಜ್ಯಗಳಿಗೆ ವಿಮಾನ ಹಾರಾಟ ಆರಂಭವಾಗಲಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss