ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಜಮಖಂಡಿ:
ಬರುವ ಮೇ 15 ನೇ ದಿನಾಂಕದ ವರೆಗೆ ಕೊರೋನಾ ಮಹಾಮಾರಿಯು ಹೆಚ್ಚು ಹಬ್ಬುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದು. ಯಾವುದೇ ರೀತಿಯ ಅನಾನುಕೂಲಗಳು ಬರದ ಹಾಗೇ ನೋಡಿಕೊಳ್ಳಲು ಜಿಲ್ಲಾಡಳಿತ ಸನ್ನದ್ದವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಹೇಳಿದರು.
ನಗರ ಮಿನಿ ವಿಧಾನ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೊರೋನಾ ಕಟ್ಟಿಹಾಕಲು ಒಂದೆರಡು ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳು ವಿಜ್ಞಾನಿಗಳೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುವರು. ರಾಜ್ಯದಲ್ಲಿ ಆಗಿರುವ ಕೊರೊನಾ ಮಹಾಮಾರಿಯನ್ನು ತಡೆಗಟ್ಟಲು ಸರ್ಕಾರ ಪ್ರಯತ್ನ ಮಾಡುತ್ತಿದೆ ಇದಕ್ಕೆ ಜನರು ಸಹಕಾರ ನೀಡಬೇಕಾಗಿದೆ ಎಂದರು.
ಜಮಖಂಡಿ ವಿಭಾಗಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿದರು. ಈಗಾಗಲೇ ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ.ಇದರ ಜತೆಗೆ ಜಿಲ್ಲೆಯ ಶಾಸಕರು, ಪರಿಷತ್ ಸದಸ್ಯರು, ಸಂಸದರು ಸಲಹೆಗಳನ್ನು ನೀಡಿದ್ದಾರೆ. ಲಾಕ್ ಡೌನ್ ಸೋಮವಾರದಿಂದ ಆರಂಭವಾಗಲಿದ್ದು ಸರ್ಕಾರದ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.
ಮಾದ್ಯಮದವರು ಬರಿ ಸಾವು ನೋವುಗಳನ್ನು ಬಿಟ್ಟು ಸರಕಾರ ಮಾಡುತ್ತಿರುವ ಕೆಲಸಗಳನ್ನು , ಜನರಿಗೆ ಧೈರ್ಯ ತುಂಬುವ ಹಾಗೇ ಕೆಲಸ ಮಾಡಬೇಕು ಎಂದರು.
ಕೊರೊನಾ ವ್ಯಾಕ್ಸಿನ್ನ್ನು ಸರಕಾರ ಮಾರ್ಚ ೧ ರಂದು ಬಿಡುಗಡೆ ಮಾಡಿತ್ತು ಆಗ ಸಾರ್ವಜನಿಕರು ನಿರ್ಲಕ್ಷಿಸಿತ್ತು, ಈಗ ಕೊರೊನಾ ಹಾವಳಿ ಹೆಚ್ಚಾಗಿದ್ದರಿಂದ ಜನರು ವ್ಯಾಕ್ಸಿನ್ ಹಾಕಿಸಿಕೊಳ್ಳಲು ಮುಗಿಬಿದಿದ್ದಾರೆ. ಪ್ರತಿಯೊಬ್ಬರಿಗೂ ಲಸಿಕೆಯನ್ನು ನೀಡಲಾಗುವುದು. ಒಂದು ವಾರದೊಳಗಾಗಿ ಎಲ್ಲ ದ್ವಿತೀಯ ಡೋಸ ಲಸಿಕೆ ಪೂರ್ಣಗೊಳಿಸಿ ನಂತರ ಮತ್ತೆ ಪ್ರಾರಂಬಿಕ ಲಸಿಕೆಯನ್ನು ಚಾಲನೆ ಗೊಳಿಸಲಾಗುವದು. ಸರಕಾರ ಘೋಸಿಸಿದ ೧೮ ರಿಂದ ೪೫ ವಯೋಮಾನದವರಿಗೆ ನೀಡಬೇಕೆಂದಿದ್ದ ಲಸಿಕೆಯನ್ನು ಇನ್ನು ಮುಂದುವರೆಸಲಾಗುವದು ಎಂದು ಹೇಳಿದರು.
ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಆನಂದ ನ್ಯಾಮಗೌಡರ , ಸಿದ್ದು ಸವದಿ, ಮಾಜಿ ಶಾಸಕ ಕುಲಕರ್ಣಿ, ಜಿಲ್ಲಾಧಿಕಾರಿ ರಾಜೇಂದ್ರ ಇದ್ದರು.