ಬಳ್ಳಾರಿ: ಮಹಾಮಾರಿ ಕೊರೊನಾ ನಿಯಂತ್ರಿಸುವಲ್ಲಿ ನಮ್ಮ ರಾಜ್ಯ ದೇಶದಲ್ಲೇ ಗಮನಸೆಳೆದಿದೆ, ಇಡೀ ರಾಜ್ಯಾದ್ಯಂತ ಕೊರೋನಾ ಸೋಂಕಿತ 13 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದರು. ಇಲ್ಲಿವರೆಗೆ ರಾಜ್ಯದಲ್ಲಿ ೪೮೩೫ ಸೊಂಕಿತರ ಪೈಕಿ ೧೬೮೮ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅದರಲ್ಲಿ ೧೩ ಜನ ಸೊಂಕಿತರು ಮಾತ್ರ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಇಲ್ಲಿವರೆಗೂ ಯಾರೂ ವೆಂಟಿಲ್ ಟರ್ ಮೂಲಕ ಚಿಕಿತ್ಸೆ ಪಡೆಯುತ್ತಿಲ್ಲ ಎಂದರು. ಇಲ್ಲಿವರೆಗೆ ರಾಜ್ಯದಲ್ಲಿ ೩.೬೦ ಲಕ್ಷಿಂತ ಹೆಚ್ಚು ಜನರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇದರಲ್ಲಿ ೪೮೩೫ ಜನರಿಗೆ ಸೊಂಕು ಇರುವುದು ದ್ರಢಪಟ್ಟಿದೆ ಎಂದರು.
ಖಾಸಗಿ ಶಾಲೆಗಳಲ್ಲಿ ಪಾಲಕರಿಂದ ಹೆಚ್ಚುವರಿ ಶುಲ್ಕ ಪಡೆಯಲಾಗುತ್ತದೆ ಎನ್ನುವ ದೂರುಗಳು ಸಾಕಷ್ಟಿದ್ದು, ಇದನ್ನು ಆಡಳಿತ ಮಂಡಳಿಯ ವರು ಕೈಬಿಡಬೇಕು. ಉಚ್ಛ ನ್ಯಾಯಾಲಯದ ಸೂಚನೆಯಂತೆ ಮಕ್ಕಳ ಪಾಲಕರಿಂದ ಶುಲ್ಕವನ್ನು ಪಡೆಯಬೆಕು. ಈ ಕುರಿತು ನಾಗರಿಕರಿಂದ ದೂರುಗಳು ಬಂದಲ್ಲಿ ಕೂಡಲೆ ಅಂತಹ ಶಾಲೆಗಳ ಮುಖ್ಯಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಯಾವುದೇ ಲಾಭಿಗಳು ನಡೆದರೂ ಜಗ್ಗುವ ಜಾಯಮಾನ ನನ್ನದಲ್ಲ, ನನ್ನ ತಾಯಿಯು ಸರ್ಕಾರಿ ಶಾಲೆ ಶಿಕ್ಷಕಿಯಾಗಿದ್ದು, ಅದರ ಅರಿವು ನನಗಿದೆ. ತಾಯಿ ಋಣವನ್ನು ತೀರಿಸುವ ಕೆಲಸ ಮಾಡುವೆ ಎಂದರು.