ಹೊಸ ದಿಗಂತ ವರದಿ, ವಿಜಯಪುರ:
ಕೊರೋನಾ ನಿಯಮ ಉಲ್ಲಂಘನೆ ಹಿನ್ನೆಲೆ ನಗರದ ಶಾಸ್ತ್ರಿ ಮಾರುಕಟ್ಟೆ ಹತ್ತಿರದ ಮೂರು ಅಂಗಡಿಗಳ ಮೇಲೆ ಪಾಲಿಕೆ ಅಧಿಕಾರಿಗಳು ಭಾನುವಾರ ದಾಳಿ ನಡೆಸಿ, ಅಂಗಡಿಗಳಿಗೆ ಬೀಗ ಹಾಕಿದರು.
ಇಲ್ಲಿನ ಶಾಸ್ತ್ರಿ ಮಾರುಕಟ್ಟೆ ಹತ್ತಿರದ ಪೂರ್ವಿ, ಸಂಗೀತ ಮೊಬೈಲ್ ಹಾಗೂ ಪಕ್ಕದ ಅಂಗಡಿಗಳು ಕೊರೋನಾ ನಿಯಮ ಉಲ್ಲಂಘಿಸಿದಕ್ಕೆ, ಮಹಾನಗರ ಪಾಲಿಕೆ ಆಯುಕ್ತ ಹರ್ಷ ಶೆಟ್ಟಿ ನೇತೃತ್ವದಲ್ಲಿ ದಾಳಿ ನಡೆಸಿ, ಬೀಗ ಹಾಕಲಾಯಿತು.