Monday, July 4, 2022

Latest Posts

ಕೊರೋನಾ ನಿರ್ವಹಣೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿಶ್ವಕ್ಕೆ ಮಾದರಿ: ಉದ್ಯಮಿ ವಿಜಯ ಸಂಕೇಶ್ವರ

ಹುಬ್ಬಳ್ಳಿ: ಕೊರೋನಾ ನಿರ್ವಹಣೆಯಲ್ಲಿ ವಿಶ್ವಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾದರಿಯಾಗಿದ್ದಾರೆ ಎಂದು ಉದ್ಯಮಿ ವಿಜಯ ಸಂಕೇಶ್ವರ ಹೇಳಿದರು.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದುವರೆದ ರಾಷ್ಟ್ರಗಳಿಗೂ ಕೊರೋನಾ ವಿರುದ್ಧದ ಹೋರಾಟ ಸವಾಲಾಗಿ ಪರಿಣಮಿಸಿತ್ತು. ವಿಶ್ವವನ್ನೇ ಬೆಚ್ಚಿ ಬಿಳುವಂತೆ ಮಾಡಿದ ಕೊರೋನಾವನ್ನು ಪ್ರಧಾನಿ ಮೋದಿ ಎಲ್ಲರೂ ಮೆಚ್ಚುವಂತೆ ಮಾಡಿದ್ದಾರೆ ಎಂದರು. ಕೊರೋನಾ ವಿರುದ್ಧದ ಹೋರಾಟದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪ್ರಧಾನಿಯವರ ಮೆಚ್ಚುಗೆ ಪಡೆದಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುತ್ತಿವೆ. ಸದ್ಯ ಉದ್ಯಮ ಸಂಕಷ್ಟದಲ್ಲಿರುವುದರಿಂದ ಯಾವುದೇ ನೆರವು ನೀಡಲು ಸಾಧ್ಯವಾಗಿಲ್ಲ. ಹೀಗಾಗಿ ನನಗೆ ಬರುತ್ತಿರು ಮಾಜಿ ಸಂಸದನ ಪಿಂಚಣಿಯನ್ನು ಸರ್ಕಾರಕ್ಕೆ ನೀಡುತ್ತಿದ್ದೇನೆ . ಇನ್ನು ಮುಂದೆ ಪಿಂಚಣಿ ಪಡೆಯುವುದಿಲ್ಲ ಎಂದರು .
ಪಕ್ಷದ ನಿಷ್ಠಾವಂತ ಕಾರ್ಯಕರ್ತ:
ರಾಜ್ಯಸಭೆ ಸದಸ್ಯತ್ವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾನು ಭಾರತೀಯ ಜನತಾ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದು, ಆದೇಶ ಪಾಲಿಸುತ್ತೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನ ಚಾಚೂ ತಪ್ಪದೆ ನಿಭಾಯಿಸುತ್ತೇನೆ ಎಂದರು.
ಹವಾನಿಯಂತ್ರಿತ ಯಂತ್ರದಿಂದ ಹೊರಗಿನಗಿಂತ 17 ಪಟ್ಟು ಕಲುಷಿತ ಗಾಳಿ ಬರುತ್ತದೆ . ಹೆಫಾ ಫಿಲ್ಟರ್ ಅಳವಡಿಕೆಯಿಂದ ತಡೆಯಬಹುದು . ಇದನ್ನು ಪಾರ್ಲಿಮೆಂಟ್ , ವಿಧಾನಸೌಧ , ಹೋಟೆಲ್ ಗಳಲ್ಲಿ ಅಳವಡಿಸುವಂತೆ ಪ್ರಧಾನಮಂತ್ರಿ , ಮುಖ್ಯಮಂತ್ರಿಗೆ ಪತ್ರ ಬರೆಯುತ್ತೇನೆ ಎಂದರು.
ಸ್ವದೇಶಿ ವಸ್ತು ಬಳಿಸಿ:
ಕೊರೋನಾದಿಂದ ದೇಶ ಆರ್ಥಿಕವಾಗಿ ಕುಗ್ಗಿದೆ. ಭವಿಷ್ಯದಲ್ಲಿ ದೇಶ ಸದೃಢಗೊಳ್ಳಲು ಸ್ವದೇಶಿ ವಸ್ತುಗಳನ್ನು ಬಳಿಸಿ. ವಿದೇಶಿ ಕಂಪನಿಯ ಸ್ಯಾನಿಟೈಸರ್ ಬಳಕೆ ಮಾಡುವ ಬದಲು ಬೇವಿನ ಎಣ್ಣೆಯಿಂದ ತಯಾರಿಸಿದಂತಹ ಸ್ವದೇಶಿ ಸ್ಯಾನಿಟೈಸರ್ ಬಳಕೆ ಮಾಡಿ. ಪೂರ್ವಜನರು ನಡೆಸಿಕೊಂಡ ಜೀವನ ಪದ್ಧತಿ ಅಳವಡಿಸಿಕೊಳ್ಳುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ವೈದ್ಯಕೀಯ , ಪೊಲೀಸ್ , ಪೌರ ಕಾರ್ಮಿಕರು , ಮಾಧ್ಯಮದವರು ಶ್ರಮ ಪಡುತ್ತಿದ್ದಾರೆ . ನಮ್ಮ ಮಾಧ್ಯಮ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕೊರೊನಾದಿಂದ ಮೃತಪಟ್ಟರೆ 50 ಲಕ್ಷ ಪರಿಹಾರ ನೀಡಲಾಗುವುದು ಎಂದರು.
ನಿಯಮ ಪಾಲನೆ ಇಲ್ಲ: ನಮ್ಮ ಬಸ್ಗಳಲ್ಲಿ ಸಾಮಾಜಿಕ ಅಂತರವನ್ನು ಪಾಲನೆ ಮಾಡುತ್ತಿದ್ದೇವೆ. ಸರ್ಕಾರದ ಎಲ್ಲಾ ನಿಯಮವನ್ನು ಪಾಲಿಸುತ್ತೇವೆ. ಸರ್ಕಾರಿ ಬಸ್ಗಳು ಎಲ್ಲ ನಿಯಮವನ್ನು ಗಾಳಿಗೆ ತೂರುತ್ತಿವೆ. ನಾವು ಕೇವಲ 20 ಸೀಟ್ಗಳನ್ನು ಹಾಕುತ್ತಿದ್ದೇವೆ. ನಮ್ಮ 400 ಬಸ್ಗಳಲ್ಲಿ ಕೇವಲ 25 ಬಸ್ಗಳು ಕಾರ್ಯ ನಿರ್ವಹಿಸುತ್ತಿವೆ. ಜನರಲ್ಲಿ ಭಯವಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತಾಸಕ್ತಿಯೇ ನಮ್ಮ ಹೊಣೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss