ವಾಷಿಂಗ್ಟನ್: ಕೊರೋನಾ ಸೋಂಕು ಪತ್ತೆ ಸಂಬಂಧ ಮತ್ತಷ್ಟು ಬಿಗಿ ನಿಲುವು ತಾಳಿರುವ ಅಮೆರಿಕ, ಶೀಘ್ರವೇ ತಜ್ಞರ ತಂಡವನ್ನು ಚೀನಾಗೆ ಕಳುಹಿಸಲು ತೀರ್ಮಾನಿಸಿದೆ.
ಇಡೀ ಪ್ರಪಂಚಕ್ಕೆ ಕೊರೋನಾ ಸೋಂಕು ಇಂದು ದೊಡ್ಡ ಸವಾಲಾಗಿದ್ದು, ಇದರ ಮೂಲವನ್ನು ಪತ್ತೆ ಹಚ್ಚುವ ವಿಚಾರದಲ್ಲಿ ಯಾವುದೇ ರಾಜಿಯಿಲ್ಲ ಎಂದು ಅಮೆರಿಕ ರಾಷ್ಟಾçಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾನವಾರ ಶ್ವೇತಭವನದಲ್ಲಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು. ಇದೇ ವೇಳೆ ಅಮೆರಿಕ ತಜ್ಞರನ್ನು ಚೀನಾ ಆಹ್ವಾನಿಸಿಲ್ಲ. ಆದರೂ ತಜ್ಞರು ಚೀನಾದಲ್ಲಿ ಕೊರೋನಾ ಸೋಂಕಿನ ತನಿಖೆಯನ್ನು ಮುಂದುವರಿಸುವುದು ಖಚಿತ ಎಂದು ಟ್ರಂಪ್ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.
ಅಮೆರಿಕ ಹಾಗೂ ಚೀನಾ ನಡುವಣ ವ್ಯಾಪಾರ, ವಾಣಿಜ್ಯ ಸಂಬAಧ ಹದಗೆಟ್ಟಿಲ್ಲ. ಆದರೆ ವುಹಾನ್ ಮಾಂಸದ ಮಾರುಕಟ್ಟೆ ಹಾಗೂ ವೈರಾಣು ಹರಡುವಿಕೆ ಸಂಬಂಧ ಚೀನಾ ಅಧ್ಯಕ್ಷರ ಜೊತೆ ಇದುವರೆಗೆ ಯಾವುದೇ ಮಾತುಕತೆ ಆಗಿಲ್ಲ. ಹೇಳಬೇಕೆಂದರೆ ಚೀನಾದಲ್ಲಿಯೇ ಇದುವರೆಗೆ ಅತಿ ಹೆಚ್ಚು ಕೊರೋನಾ ಸಾವಿನ ಪ್ರಕರಣಗಳು ಸಂಭವಿಸಿದ್ದು ಈ ಸಂಗತಿಯನ್ನು ಚೀನಾ ಮುಕ್ತವಾಗಿ ಪ್ರಪಂಚಕ್ಕೆ ತಿಳಿಸುತ್ತಿಲ್ಲ ಎಂದೂ ಅವರು ಹೇಳಿದರು.