ಕೊರೋನಾ ಪಾಸಿಟಿವ್: ಕ್ವಾರೆಂಟೈನ್‌ನಲ್ಲಿ ಇಸ್ರೇಲ್ ಪ್ರಧಾನಮಂತ್ರಿ ನೇತನ್ಯಾಹು

0
92

ಜೆರುಸಲೇಮ್: ಇಸ್ರೇಲ್ ದೇಶದ ಪ್ರಧಾನಮಂತ್ರಿ ಬೆಂಜಮಿನ್ ನೇತನ್ಯಾಹು ಕ್ವಾರೆಂಟೈನ್ ‘ವಶ’ದಲ್ಲಿದ್ದಾರೆ.
ಕೋವಿಡ್ 19 ವೈರಸ್‌ನಿಂದ ಬಳಲುತ್ತಿರುವ ಅವರು, ಸ್ವಯಂನಿರ್ಬಂಧಕ್ಕೆ ಒಳಗಾಗಿದ್ದಾರೆ (ಕ್ವಾರೆಂಟೈನ್) ಎಂದು ಪ್ರಧಾನಿ ಕಚೇರಿ ಮೂಲಗಳು ತಿಳಿಸಿವೆ.
ನೇತನ್ಯಾಹು ಅವರಿಗೆ ಅನಾರೋಗ್ಯ ಕಾಡಿದ ಹಿನ್ನೆಲೆಯಲ್ಲಿ ಅವರನ್ನು ವೈದ್ಯಕಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿ ಪಾಸಿಟಿವ್ ಎಂದು ದಾಖಲಾಗಿದ್ದು, ಹೀಗಾಗಿ ಅವರು ಸ್ವಯಂನಿರ್ಬಂಧಕ್ಕೆ ಒಳಗಾಗಿದ್ದಾರೆ.
ಇಸ್ರೇಲ್ ನಲ್ಲಿ ಇಲ್ಲಿಯವರೆಗೆ 4347 ಕೋವಿಡ್ 19 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. 134 ಸೋಂಕಿತರು ಈಗಾಗಲೇ ಚೇತರಿಸಿಕೊಂಡಿದ್ದಾರೆ. ಹದಿನಾರು ಸೋಂಕಿತರು ಸಾವನ್ನಪ್ಪಿದ್ದು, 95 ಪ್ರಕರಣಗಳು ಗಂಭೀರ ಸ್ವರೂಪದ್ದಾಗಿವೆ.

LEAVE A REPLY

Please enter your comment!
Please enter your name here