Sunday, June 26, 2022

Latest Posts

ಕೊರೋನಾ ಪಾಸಿಟಿವ್ ಪ್ರಕರಣಗಳ ಪತ್ತೆಗೆ ವ್ಯಾಪಕ ಪರೀಕ್ಷೆ: ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಮನವಿ

ಯಾದಗಿರಿ : ನೋವೆಲ್ ಕೊರೊನಾ ವೈರಸ್ ಅನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸಿದ ವಲಸೆ ಕಾರ್ಮಿಕರ ಗಂಟಲು ದ್ರವ ಮಾದರಿಗಳನ್ನು ತ್ವರಿತಗತಿಯಲ್ಲಿ ಸಂಗ್ರಹಿಸಿ, ಕೊರೊನಾ ಪಾಸಿಟಿವ್ ಪ್ರಕರಣಗಳ ಪತ್ತೆಗೆ ವ್ಯಾಪಕವಾಗಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ವಾಪಸ್ಸಾದ ಸುಮಾರು 15 ಸಾವಿರ ಜನ ಮಹಾರಾಷ್ಟç ರಾಜ್ಯದ ಮುಂಬೈ, ಪುಣೆ, ಠಾಣೆ ಸ್ಥಳಗಳಿಂದ ಬಂದವರಾಗಿದ್ದಾರೆ. ಇವರಲ್ಲಿಯೇ ಹೆಚ್ಚಿನ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಪಾಸಿಟಿವ್ ಪ್ರಕರಣಗಳನ್ನು ತ್ವರಿತಗತಿಯಲ್ಲಿ ಪತ್ತೆ ಹಚ್ಚುವ ಸಲುವಾಗಿ ದಿನಕ್ಕೆ ಸಾವಿರಕ್ಕಿಂತ ಹೆಚ್ಚಿನ ಮಾದರಿಗಳ ಪರೀಕ್ಷೆ ನಡೆಯುತ್ತಿದೆ. ರಾಜ್ಯ ಸರ್ಕಾರ ಯಾದಗಿರಿ ಜಿಲ್ಲೆಯ ಮಾದರಿಗಳ ಪರೀಕ್ಷೆಗಾಗಿ ಬೆಂಗಳೂರಿನ ವಿವಿಧ ಲ್ಯಾಬ್‌ಗಳಲ್ಲಿ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಜಿಲ್ಲೆಯ ಪಾಸಿಟಿವ್ ಪ್ರಕರಣಗಳಲ್ಲಿ ಜೂನ್ 8 ವರಿಗೆ 104 ಜನರು ಗುಣಮುಖ ಹೊಂದಿದ್ದು, ಇವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿ, ಮನೆ ದಿಗ್ಬಂಧನಕ್ಕಾಗಿ ಕಳುಹಿಸಲಾಗಿರುತ್ತದೆ ಎಂದು ತಿಳಿಸಿದರು. ಕೋವಿಡ್-19 ವೈರಾಣು ಇಡೀ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಯಾದಗಿರಿ ಜಿಲ್ಲೆಯ ಗಡಿ ಭಾಗದಲ್ಲಿ ಒಟ್ಟು 16 ಚೆಕ್‌ಪೋಸ್ಟ್ಗಳು ಕಾರ್ಯನಿರ್ವಹಿಸುತ್ತಿದ್ದು, ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಜೂನ್ 8ರವರೆಗೆ ಒಟ್ಟು 1657 ವಾಹನಗಳನ್ನು ಜಪ್ತಿ ಮಾಡಲಾಗಿದೆ. 53 ಜನರನ್ನು ಬಂಧಿಸಲಾಗಿದ್ದು, ಒಟ್ಟು 107 ಎಫ್.ಐ.ಆರ್ ದಾಖಲಾಗಿವೆ ಮತ್ತು 35,96,200 ರೂ. ದಂಡ ವಿಧಿಸಲಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಆತ್ಮ ನಿರ್ಭರ ಭಾರತ್ ಅಭಿಯಾನ ಯೋಜನೆ: ಕೋವಿಡ್-19 ಪರಿಸ್ಥಿತಿ ಹಿನ್ನಲೆಯಲ್ಲಿ ರಾಷ್ಟಿçÃಯ ಆಹಾರ ಭದ್ರತಾ ಕಾಯ್ದೆಯಡಿ ಹಾಗೂ ರಾಜ್ಯದ ಸಾರ್ವಜನಿಕರಿಗೆ ವಿತರಣಾ ಪದ್ಧತಿಯಡಿ ಒಳಪಡದ ವಲಸೆ ಕಾರ್ಮಿಕರು ಹಾಗೂ ಕೋವಿಡ್ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿರುವ ವಲಸಿಗರಿಗೆ ಮೇ ಮಾಹೆಯಲ್ಲಿ ಪಡಿತರ ಪಡಯದೇ ಇರುವ ಫಲಾನುಭವಿಗಳಿಗೆ ಮೇ ಮತ್ತು ಜೂನ್ ಮಾಹೆಗಳಿಗೆ ಪ್ರತಿ ಫಲಾನುಭವಿಗೆ ತಲಾ 10 ಕೆ.ಜಿ. ಅಕ್ಕಿ ಮತ್ತು ಪತ್ರಿ ಫಲಾನುಭವಿ ಕುಟುಂಬಕ್ಕೆ 2 ಕೆ.ಜಿ ಕಡಲೆಕಾಳು ಆಹಾರಧಾನ್ಯ ವಿತರಿಸಲು ಆದೇಶಿಸಲಾಗಿದೆ. ಜೂನ್ 8ರ ಮಧ್ಯಾಹ್ನ 12 ಗಂಟೆಯವರೆಗೆ 3,700 ಫಲಾನುಭವಿಗಳಿಗೆ ಆಹಾರ ಧಾನ್ಯ ವಿತರಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿರುವ ಕಾರಣ ಸೋಂಕಿತರನ್ನು ಕ್ಟಾರಂಟೈನ್ ಮಾಡಬೇಕಾಗಿರುವುದು ಅತ್ಯವಶ್ಯಕ. ಹಾಗಾಗಿ, ಜಿಲ್ಲೆಯಾದ್ಯಂತ ಖಾಸಗಿ ಮತ್ತು ಅನುದಾನಿತ ಶಾಲೆ, ಕಾಲೇಜುಗಳು, ಹಾಸ್ಟೆಲ್‌ಗಳು, ಕಲ್ಯಾಣ ಮಂಟಪಗಳು, ಶಾದಿ ಮಹಲ್‌ಗಳನ್ನು ಅಧಿಗ್ರಹಣ ಮಾಡುತ್ತಿದ್ದು, ಆಯಾ ತಾಲೂಕಿನ ಇನ್‌ಸಿಡೆಂಟ್ ಕಮಾಂಡರ್‌ಗಳಾದ ತಹಶೀಲ್ದಾರರಿಗೆ ಹಸ್ತಾಂತರಿಸಲು ಸೂಚಿಸಲಾಗಿದೆ. ಒಂದು ವೇಳೆ ಸದರಿ ಕಟ್ಟಡಗಳು ದುರಸ್ತಿಯಲ್ಲಿ ಇದ್ದ ಪಕ್ಷದಲ್ಲಿ ಸಂಬAಧಿಸಿದ ಆಡಳಿತ/ ವ್ಯವಸ್ಥಾಪಕ ಮಂಡಳಿಯವರು ತಕ್ಷಣವೇ ಅವಶ್ಯಕ ದುರಸ್ತಿಯನ್ನು ಪೂರ್ಣಗೊಳಿಸಿ ಹಸ್ತಾಂತರಿಸಲು ಸೂಚಿಸಿದರು.
19 ಕಂಟೇನ್ಮೆAಟ್ ಝೋನ್ ಘೋಷಣೆ: ಜಿಲ್ಲೆಯಲ್ಲಿ ಒಟ್ಟು 19 ನಿರ್ಬಂಧಿತ ವಲಯ (ಕಂಟೇನ್ಮೆAಟ್ ಝೋನ್)ಗಳನ್ನು ಗುರತಿಸಲಾಗಿದ್ದು, ಕಂಟೇನ್ಮೆAಟ್ ಝೋನ್ ಆ್ಯಪ್ (ಸಿಝಡ್ ಆ್ಯಪ್) ಮುಖಾಂತರ ಶೇಕಡಾ 60.44 ರಷ್ಟು ಸರ್ವೇ ಮಾಡಲಾಗಿರುತ್ತದೆ. ಇನ್ನು ಜಿಲ್ಲೆಯಾದ್ಯಂತ ಮತಗಟ್ಟೆ ಅಧಿಕಾರಿಗಳು, ಶಿಕ್ಷಕರು ಮತ್ತು ಆಶಾ ಕಾರ್ಯಕರ್ತೆಯರಿಂದ “ಹೆಲ್ತ್ ವಾಚ್ ಆ್ಯಪ್” ಮೂಲಕ ನಡೆಸುತ್ತಿರುವ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆ ಕಾರ್ಯ ಶೇ.89.65ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಅವರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss