Monday, July 4, 2022

Latest Posts

ಕೊರೋನಾ ಪಾಸಿಟಿವ್ ವ್ಯಕ್ತಿ ನಿಗೂಢ ನಾಪತ್ತೆ: ಕೋಲಾರಕ್ಕೆ ಹೊಸ ಆತಂಕ ಶುರು

ಕೋಲಾರ:  ಜಿಲ್ಲೆಯಲ್ಲಿ ಮತ್ತೊಂದು ಕೊರೋನಾ ಪಾಸಿಟೀವ್ ಪ್ರಕರಣ ವರದಿಯಾಗಿದ್ದು, ತುಮಕೂರಿನಿಂದ ಬಂಗಾರಪೇಟೆಗೆ ಬಂದಿದ್ದ ೪೦ ವರ್ಷದ ಪಿ.೪೮೬೩ ಪಾಸಿಟೀವ್ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇದೀಗ ಈತ ನಾಪತ್ತೆಯಾಗಿರುವುದು ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ. ತುಮಕೂರಿನಿಂದ ಬಂದಿದ್ದ ಈ ವ್ಯಕ್ತಿಯಲ್ಲಿ ಸೋಂಕು ಕಾಣುವ ಮೂಲಕ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ ೩೦ಕ್ಕೇರಿದೆ.
ಕಳೆದ ಜೂ.೩ ರಂದು ಕೋಲಾರಕ್ಕೆ ಬಂದಿದ್ದ ಈ ವ್ಯಕ್ತಿ ಬಂಗಾರಪೇಟೆಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿರುವುದಾಗಿ ಹೇಳಿ ಜಿಲ್ಲಾಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿ ನೀಡಿ ಹೋಗಿದ್ದ.
ಪಾಸಿಟೀವ್ ಎಂದು ತಿಳಿದ ಕೂಡಲೇ ಆರೋಗ್ಯ ಇಲಾಖೆ ಅಧಿಕಾರಿಗಳು ಈತನಿಗೆ ದೂರವಾಣಿ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಈತ ಪಾಸಿಟೀವ್ ಎಂದು ತಿಳಿದ ಕೂಡಲೇ ಫೋನ್ ಸ್ವಿಚ್ ಆಫ್ ಮಾಡಿ ಪರಾರಿಯಾಗಿದ್ದಾನೆ.
ಇದೀಗ  ಈ ವ್ಯಕ್ತಿಯ ಗಂಟಲುದ್ರವ ಮಾದರಿಯ ಫಲಿತಾಂಶ ಪಾಸಿಟೀವ್ ಆಗಿದ್ದು, ಈ ವ್ಯಕ್ತಿಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss