Tuesday, July 5, 2022

Latest Posts

ಕೊರೋನಾ ಪೀಡಿತರಿಗೆ ಮನೆಯಲ್ಲೇ ಚಿಕಿತ್ಸಾ ವ್ಯವಸ್ಥೆಗೆ ಟೆಲಿ ಮಾನಿಟರಿಂಗ್ ಸೆಂಟರ್ ಸ್ಥಾಪನೆ!

ಪುತ್ತೂರು: ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿತರ ಸಂಪರ್ಕದಲ್ಲಿದ್ದು ದೈಹಿಕವಾಗಿ ಸದೃಢರಾಗಿರುವ ವ್ಯಕ್ತಿಗಳಿಗೆ ‘ಮನೆಯಲ್ಲಿಯೇ ಚಿಕಿತ್ಸೆ’ (ಐಸೋಲೇಷನ್) ಪಡೆಯುವ ವ್ಯವಸ್ಥೆ ಜಾರಿಯಲ್ಲಿದ್ದು, ಈ ವ್ಯವಸ್ಥೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆರೋಗ್ಯ ವಿಚಾರಿಸಿ, ಮಾನಸಿಕ ಸ್ಥೈರ್ಯ ಹೆಚ್ಚಿಸಲು ಪುತ್ತೂರು ನಗರಸಭೆ ವಿಶೇಷ ಕಾಳಜಿ ವಹಿಸಿದ್ದು, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರ ನೇತೃತ್ವದಲ್ಲಿ ಪ್ರತಿ ದಿನ ನುರಿತ ವೈದ್ಯರ ಆಪ್ತಸಮಾಲೋಚಕರ ತಂಡ ಗೂಗಲ್ ಮೀಟ್‌ನಲ್ಲಿ ನೇರ ನೇರ ಸಲಹೆ ಮತ್ತು ಮಾಹಿತಿ ಪಡೆಯುವ ಕಾರ್ಯಾರಂಭ ಮಾಡಿದೆ. ದ.ಕ. ಜಿಲ್ಲೆಯಲ್ಲಿ ಈ ರೀತಿಯ ಕಾರ್ಯಕ್ರಮ ಮಾದರಿಯಾಗಲಿದೆ.
ಪುತ್ತೂರು ನಗರಸಭೆಯ ಕಚೇರಿಯಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಗೂಗಲ್ ಮೀಟ್‌ನಲ್ಲಿ ಹೋಮ್ ಐಸೋಲೇಷನ್‌ನಲ್ಲಿರುವವರನ್ನು ಸಂಪರ್ಕಿಸುವ ಟೆಲಿ ಮಾನಿಟರಿಂಗ್ ಸೆಂಟರ್ ಸ್ಥಾಪಿಸಲಾಗಿದ್ದು, ನಗರಸಭೆ ಪೌರಾಯುಕ್ತೆ ರೂಪಾ ಶೆಟ್ಟಿಯವರ ನೊಡೇಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ತಂಡದಲ್ಲಿ ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರುಗಳನ್ನು ಆಪ್ತ ಸಮಾಲೋಚಕರನ್ನು ನೇಮಿಸಲಾಗಿದೆ. ಕೊರೋನಾ ಸೋಂಕಿನಿಂದಾಗಿ ಹೋಮ್ ಐಸೋಲೇಷನ್‌ನಲ್ಲಿ ಇರುವವರಿಗೆ ಧೈರ್ಯ ತುಂಬುವುದರೊಂದಿಗೆ ಆರೋಗ್ಯ ವಿಚಾರಿಸುವ ಹೊಣೆಗಾರಿಕೆ ಗೂಗಲ್ ಮಾನಿಟರಿಂಗ್ ಸೆಂಟರಿದ್ದಾಗಿದೆ.
ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೋವಿಡ್-೧೯ ಮಾರ್ಗಸೂಚಿ ಬದಲಿಸಿ, ಪರಿಸ್ಥಿತಿ ಗಂಭೀರವಾಗಿರುವವರನ್ನು ಮಾತ್ರ ಕೋವಿಡ್ ಆಸ್ಪತ್ರೆಯಲ್ಲಿ, ವೆಂಟಿಲೇಟರ್ ಅವಶ್ಯಕತೆ ಇಲ್ಲದವರಿಗೆ ಕೋವಿಡ್ ಕೇರ್ ಸೆಂಟರ್‌ನಲ್ಲಿ, ವೈದ್ಯರ ಉಪಸ್ಥಿತಿ ಬೇಡದೆ ನಿಗದಿತ ಸಮಯದಲ್ಲಿ ಔಷಧಿ ಸೇವಿಸುವ ದೈಹಿಕವಾಗಿ ಸದೃಢವಾಗಿರುವ ಸೋಂಕಿತರನ್ನು ಅವರ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ನಿಟ್ಟಿನಲ್ಲಿ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆದು ಕೊಳ್ಳುತ್ತಿರುವವರ ಆರೋಗ್ಯ ವಿಚಾರಣೆಗಾಗಿ ಟೆಲಿಮಾನಿಟರಿಂಗ್ ಮತ್ತು ಆಶಾ ಕಾರ್ಯಕರ್ತರು, ಎ.ಎನ್.ಎಂ.ಗಳು ಮನೆ ಮನೆಗೆ ಭೇಟಿ ವಿಚಾರಿಸುವ ಕೆಲಸ ಮಾಡುತ್ತಿದ್ದರೂ ವೈದ್ಯರು ಅವರೊಂದಿಗೆ ನೇರ ಮುಖತಃ ಸಂಪರ್ಕದಲ್ಲಿದ್ದು ಆರೋಗ್ಯ ವಿಚಾರಣೆ ಮಾಡಬೇಕೆಂದು ಪುತ್ತೂರು ನಗರಸಭೆ ಗೂಗಲ್ ಮೀಟ್ ಮೂಲಕ ಹೊಸ ಮಾದರಿಯಲ್ಲಿ ಗೂಗಲ್ ಮಾನಿಟರಿಂಗ್ ಸೆಂಟರ್ ಕಾರ್ಯಾರಂಭ ಮಾಡಿದ್ದು, ಹೋಮ್ ಐಸೋಲೇಷನ್‌ನಲ್ಲಿರುವ ಸೋಂಕಿತರೊಂದಿಗೆ ಕರೆ ಮಾಡಿ ಅವರೊಂದಿಗೆ ಗೂಗಲ್ ಆನ್‌ಲೈನ್ ಸಂಪರ್ಕ ಪಡೆದು ಅವರೊಂದಿಗೆ ಮುಖತಃ ಮಾತನಾಡುವ ಮತ್ತು ನಿರಂತರ ಒಡನಾಟ ಇಟ್ಟುಕೊಂಡು ಕಾಲ ಕಾಲಕ್ಕೆ ಅಗತ್ಯ ಸಲಹೆ, ಸೂಚನೆ ನೀಡಲಾಗುತ್ತಿದೆ.
ಜು.೧೭ ರಂದು ಆರಂಭಗೊಂಡ ಆಪ್ತ ಸಮಾಲೋಚನೆಯಲ್ಲಿ ಪುತ್ತೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ಸುಲೈಹಾ, ಡಾ. ಸ್ವಾತಿ ಅವರು ಮಾಹಿತಿ, ಸಲಹೆ ನೀಡಿದರು. ನಗರಸಭೆ ಸಿಬ್ಬಂದಿ ಜ್ಯೋಷಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss