Monday, August 8, 2022

Latest Posts

ಕೊರೋನಾ ಫಲಿತಾಂಶ ನೆಗೆಟಿವ್ ಬಂದರೂ ಮಹಿಳೆಗೆ ಆಸ್ಪತ್ರೆ, ಮನೆ ಅಂತ ಅಲೆದಾಡಬೇಕಾಯಿತು!

ತುಮಕೂರು: ಕೊರೋನಾ ದೃಢ ಪಡದೆ ಇದ್ದರೂ ಸಹ ಮಹಿಳೆಯೊಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ಮತ್ತು ಕೋವಿಡ್ ಕೇರ್ ಸೆಂಟರ್ ಮತ್ತು ಆಕೆಯ ಮನೆಗೆ ಅಲೆದಾಡಿಸಿರುವ ಘಟನೆ ತಿಪಟೂರಿನಲ್ಲಿ ನಡೆದಿದೆ.
ತಿಪಟೂರು ತಾಲೂಕಿನ ಗುಡಿಗೊಂಡನಹಳ್ಳಿಯ ದಂಪತಿ ಆಗಸ್ಟ್ 1ರಂದು ಬೆಂಗಳೂರಿನಿಂದ ಬಂದ ಹಿನ್ನೆಲೆಯಲ್ಲಿ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ರಾಪಿಡ್ ಟೆಸ್ಟ್ ಮಾಡಿಸಿಕೊಂಡಿದ್ದು ಫಲಿತಾಂಶ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಮನೆಯಲ್ಲಿ 14ದಿನ ಕ್ವಾರಂಟೈನ್ ಆಗುವಂತೆ ತಿಳಿಸಿ ಅವರನ್ನು ಅವರ ಊರಾದ ಗುಡಿಗೊಂಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಹರಚನಹಳ್ಳಿ ಗ್ರಾಮಕ್ಕೆ ಕಳುಹಿಸಿಕೊಡಲಾಯಿತು ಎಂದು ಸದರಿ ಮಹಿಳೆ ತಿಳಿಸಿದ್ದಾರೆ.
ಮೂರು ದಿನಗಳ ನಂತರ ಗುಡಿಗೊಂಡನಹಳ್ಳಿಯ ಗ್ರಾಮಪಂಚಾಯಿತಿ ಆರೋಗ್ಯಾಧಿಕಾರಿ ಗುರುಪ್ರಸಾದ್ ಮಹಿಳೆಗೆ ದೂರವಾಣಿ ಕರೆ ಮಾಡಿ ನಿಮಗೆ ಸೋಂಕು ದೃಢಪಟ್ಟಿದೆ ಆದ್ದರಿಂದ ಕೂಡಲೆ ಆಸ್ಪತ್ರೆಗೆ ಬಂದು ದಾಖಲಿಸಲಾಗುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸಂಜೆಯ ವೇಳೆಗೆ ತಾವು ಆಸ್ಪತ್ರೆಯ ಬಳಿ ಹೋದರೂ ತಮಗೆ ಯಾರೂ ಸ್ಪಂದಿಸದ ಪರಿಣಾಮ,   ರಾತ್ರಿ 11ಗಂಟೆಯವರೆಗೆ ಆಸ್ಪತ್ರೆಯ ಮುಂದೆ ಕಾದು ಕುಳಿತು ಕೊಂಡಿದ್ದಾಗಿ,ರಾತ್ರಿ ಪಾಳಿಗೆ ಬಂದ ವೈದ್ಯರು ತಮ್ಮನ್ನು ಕೊನೆಹಳ್ಳಿಯ ಕೇರ್ ಸೆಂಟರಿಗೆ ಕಳುಹಿದ್ದಾಗಿ ಆಕೆ ತಿಳಿಸಿದ್ದಾರೆ.
ಆದರೆ ಸೊಂಕು ದೃಢಪಡದ ಹಿನ್ನೆಲೆಯಲ್ಲಿ ತನ್ನನ್ನು ಇಂದು ಕೇರ್ ಸೆಂಟರ್ ನಿಂದ ಹೊರಗೆ ಕಳುಹಿಸಿಕೊಡಲಾಗಿದ್ದು,  ಅಲ್ಲಿದ ತಾನು 2ಕಿಮೀ ನಡೆದು ಕೊಂಡು ತನ್ನ ಮನೆಗೆ ಬಂದರೆ ಮನೆಯ ಬಳಿ ಸೀಲ್ ಮಾಡಲಾಗಿದ್ದು ಮನೆಯ ಒಳಗೆ ಬಿಡದ ಪರಿಣಾಮ ಮನೆಯ ಮುಂದೆಯೇ ಚಳಿಯಲ್ಲಿ ಕಾದು ಕುಳಿತುಕೊಂಡಿದ್ದಾಗಿ ಅಕೆಗೆ ತಿಳಿಸಿದ್ದಾರೆ.
ನನಗೆ ಮೊದಲು ನೆಗೆಟಿವ್ ಬಂದದ್ದು ಮೂರು ದಿನಕ್ಕೆ ಪಾಸಿಟಿವ್ ಹೇಗಾಯಿತು.ಸೋಂಕು ದೃಢಪಡದೆ ಇದ್ದರೂ ಕೇರ್ ಸೆಂಟರ್ ಗೆ ಸೇರಿಸಿ ಚಿಕಿತ್ಸೆ ಕೊಟ್ಟದ್ದು ಏಕೆ. ಎಂದು ಪ್ರಶ್ನೆ ಮಾಡಿದ್ದಾರೆ. ಆದರೆ ಅವರ ಪ್ರಶ್ನೆಗಳಿಗೆ ಉತ್ತರ ಕೊಡುವರು ಯಾರೂ ಇಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss