Wednesday, July 6, 2022

Latest Posts

ಕೊರೋನಾ ಬಲಿಯಾದ ಸರ್ಬಿಯನ್ ಆರ್ಥೊಡಾಕ್ಸ್ ಚರ್ಚ್​ನ ಮುಖ್ಯಸ್ಥ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಸರ್ಬಿಯನ್ ಆರ್ಥೊಡಾಕ್ಸ್ ಚರ್ಚ್​ನ ಮುಖ್ಯಸ್ಥ 90 ವರ್ಷದ ಪ್ಯಾಟ್ರಿಯಾರ್ಕ್ ಇರಿನೆಜ್ ಕೊರೋನಾದಿಂದ ನಿಧನರಾಗಿದ್ದಾರೆ.
ಈ ಬಗ್ಗೆ ಸೆರ್ಬಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವ್ಯೂಸಿಕ್​ ಇನ್​ಸ್ಟಾಗ್ರಾಂನಲ್ಲಿ ಫೋಟೋದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ. ನಿಮ್ಮ ಒಡನಾಟದ ಬಗ್ಗೆ ತಿಳಿದಿರುವುದಕ್ಕೆ ಗೌರವವಿದೆ ಎಂದು ಶೀರ್ಷಿಕೆ ಬರೆದು ಕಪ್ಪು- ಬಿಳುಪಿನ ಚಿತ್ರವೊಂದನ್ನು ಶೇರ್​ ಮಾಡಿದ್ದಾರೆ.
ಈ ಹಿಂದೆ ಮಾಂಟೆನೆಗ್ರೊದ ಸರ್ಬಿಯನ್ ಆರ್ಥೊಡಾಕ್ಸ್ ಚರ್ಚ್‌ನ ಮುಖ್ಯಸ್ಥ ಬಿಷಪ್ ಅಮ್ಫಿಲೋಹಿಜೆ ಅವರ ಅಂತ್ಯಕ್ರಿಯೆಯಲ್ಲಿ ಪ್ಯಾಟ್ರಿಯಾರ್ಕ್ ಇರಿನೆಜ್ ಪಾಲ್ಗೊಂಡಿದ್ದರು. ಈ ಬಳಿಕ ನವೆಂಬರ್ ಆರಂಭದಲ್ಲಿ ಕೊರೋನಾದಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಕೊರೋನಾದಿಂದ ಸಾಕಷ್ಟು ಆರೋಗ್ಯ ಸಮಸ್ಯೆ ಕಂಡು ಬಂದು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇವರು 2010ರ ಜನವರಿಯಲ್ಲಿ ತನ್ನ ತಂದೆ ಪಾವ್ಲೆ ಮರಣದ ನಂತರ ಚರ್ಚ್‌ನ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss