Tuesday, August 16, 2022

Latest Posts

ಕೊರೋನಾ| ಬಾಗಲಕೋಟೆಯಲ್ಲಿಂದು 4 ಹೊಸ ಪ್ರಕರಣ ಪತ್ತೆ , ಓರ್ವ ಬಾಲಕಿ ಗುಣಮುಖ

ಬಾಗಲಕೋಟೆ: ಜಿಲ್ಲೆಯಲ್ಲಿ ಮತ್ತೆ 4 ಜನರಿಗೆ ಕೋವಿಡ್ ಸೋಂಕು ತಗಲಿರುವ ಪ್ರಕರಣಗಳು ಭಾನುವಾರ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 104ಕ್ಕೆ ಏರಿಕೆಯಾಗಿರುವುದಾಗಿ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.
ಬಾದಾಮಿ ತಾಲೂಕಿನ ಯಂಡಿಗೇರಿ ಗ್ರಾಮದ 26 ವರ್ಷದ ಯುವಕ ಪಿ-6828 (ಬಿಜಿಕೆ-101), ಗುಳೇದಗುಡ್ಡದ 54 ವರ್ಷದ ಮಹಿಳೆ ಪಿ-6829 (ಬಿಜಿಕೆ-102), 28 ವರ್ಷದ ಯುವತಿ ಪಿ-6830 (ಬಿಜಿಕೆ-103), ರಬಕವಿಯ 25 ವರ್ಷದ ಪುರುಷ ಪಿ-6831 (ಬಿಜಿಕೆ-104), ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಹೊಸದಾಗಿ ಸೊಂಕು ದೃಢಪಟ್ಟ ಪಿ-6828 ವ್ಯಕ್ತಿಯು ಆಂದ್ರ ಪ್ರದೇಶದಿಂದ ಬಂದಿದ್ದಾರೆ. ಉಳಿದ ಪಿ-6829, ಪಿ-6830, ಪಿ-6831 ಇವರಿಗೆ ಮಹಾರಾಷ್ಟ್ರದಿಂದ ಬಂದವರಾಗಿದ್ದು, ಅಲ್ಲಿನ ನಂಟಿನಿಂದ ಸೋಂಕು ತಗಲಿರುವುದು ದೃಢಪಟ್ಟಿರುತ್ತದೆ.
ಜಿಲ್ಲೆಯಿಂದ ಕಳುಹಿಸಲಾದ 157 ಸ್ಯಾಂಪಲ್‍ಗಳ ಪೈಕಿ 141 ಸ್ಯಾಂಪಲ್‍ಗಳ ವರದಿ ನೆಗಟಿವ್, 4 ಪಾಸಿಟಿವ್ ಪ್ರಕರಣ ವರದಿಯಾಗಿವೆ. ಇನ್ನು 12 ಸ್ಯಾಂಪಲ್‍ಗಳ ವರದಿ ನಿರೀಕ್ಷಿಸಲಾಗುತ್ತಿದೆ. ಪ್ರತ್ಯೇಕವಾಗಿ 641 ಜನರ ಮೇಲೆ ನಿಗಾ ವಹಿಸಲಾಗುತ್ತಿದೆ. ಜಿಲ್ಲೆಯಿಂದ ಇಲ್ಲಿಯವರೆಗೆ ಒಟ್ಟು 9367 ಸ್ಯಾಂಪಲ್‍ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 9207 ನೆಗಟಿವ್ ಪ್ರಕರಣ, 104 ಪಾಜಿಟಿವ್ ಪ್ರಕರಣ ಹಾಗೂ ಒಂದು ಮೃತ ಪ್ರಕರಣ ವರದಿಯಾಗಿರುತ್ತದೆ.
ಕೋವಿಡ್-19 ದಿಂದ ಒಟ್ಟು 89 ಜನ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು 14 ಮಾತ್ರ ಸಕ್ರಿಯ ಪ್ರಕರಣಗಳು ಇವೆ. ಇಲ್ಲಿವರೆಗೆ ಒಟ್ಟು 13 ಸ್ಯಾಂಪಲ್‍ಗಳು ಮಾತ್ರ ರಿಜೆಕ್ಟ ಆಗಿರುತ್ತವೆ. 14 ದಿನಗಳ ಕಾಲ ಇನ್‍ಸ್ಟಿಟ್ಯೂಶನ್ ಕ್ವಾಂರಂಟೈನ್‍ನಲ್ಲಿದ್ದ 3207 ಜನರನ್ನು ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಓರ್ವ ಬಾಲಕಿ ಗುಣಮುಖ
ಬೀಳಗಿ ತಾಲೂಕಿನ ನಾಗರಾಳ ಎಲ್‍ಟಿ ಗ್ರಾಮದ 17 ವರ್ಷದ ಬಾಲಕಿ ಪಿ-4535 ಕೋವಿಡ್‍ವಿಂದ ಗುಣಮುಖರಾಗಿದ್ದು, ಜಿಲ್ಲಾ ಆಸ್ಪತ್ರೆಯಿಂದ ಮಧ್ಯಾಹ್ನ ಬಿಡುಗಡೆ ಮಾಡಲಾಯಿತು. ಗುಣಮುಖರಾದ ಬಾಲಕಿ ಮಹಾರಾಷ್ಟ್ರದಿಂದ ಆಗಮಿಸಿದ್ದರಿಂದ ಅಲ್ಲಿಯ ನಂಟಿನಿಂದ ಸೋಂಕು ತಗಲಿತ್ತು. ಈಗ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಗುಣಮುಖರಾದವರಿಗೆ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ಪ್ರಮಾಣ ಪತ್ರ ವಿತರಿಸಿದರು. ನಂತರ ಆಸ್ಪತ್ರೆಯ ಸಿಬ್ಬಂದಿಗಳು ಬಾಲಕಿಯ ಕೈಗೆ ಸೀಲ್ ಹಾಕಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss