Wednesday, June 29, 2022

Latest Posts

ಕೊರೋನಾ ಬಿಕ್ಕಟ್ಟಿನ ನಡುವೆಯೂ ರಫ್ತು ವಹಿವಾಟಿನಲ್ಲಿ ಪ್ರಗತಿ: ಐದನೇ ಸ್ಥಾನದಲ್ಲಿ ಯುಪಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಲಾಕ್ ಡೌನ್ ನಿಂದ ಕುಸಿತ ಕಂಡಿದ್ದ ಆರ್ಥಿಕತೆ ನಿಧಾನಗತಿಯಲ್ಲಿ ಮೇಲೇರುತ್ತಿದ್ದು, ದೇಶದ ರಫ್ತು ವಹಿವಾಟುಗಳು ಪ್ರಗತಿ ಸಾಧಿಸಿದೆ.
ದೇಶದ ರಫ್ತು ವಹಿವಾಟಿನಲ್ಲಿ ಉತ್ತರ ಪ್ರದೇಶವು ಉತ್ತಮ ಅಭಿವೃದ್ಧಿ ಸಾಧಿಸುತ್ತಿದ್ದು, ರಾಜ್ಯ ಸರ್ಕಾರ ನಡೆಸಿದ ಸಂಖ್ಯಾಶಾಸ್ತ್ರೀಯ ಅಧ್ಯಯನದ ಪ್ರಕಾರ, 2019ರ ಏಪ್ರಿಲ್‌ನಿಂದ 2019ರ ನವೆಂಬರ್​ವರೆಗೆ 14,84,386.50 ಕೋಟಿ ರೂ. ಉತ್ಪನ್ನಗಳನ್ನು ರಫ್ತು ಮಾಡಲಾಗಿದೆ. ಅದರಲ್ಲಿ 80,058.44 ಕೋಟಿ ರೂ. ಉತ್ಪನ್ನಗಳು ಯುಪಿಯಿಂದ ರಫ್ತಾಗಿವೆ.
ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ 2020ರ ಏಪ್ರಿಲ್ ಮತ್ತು ನವೆಂಬರ್ ನಡುವೆ 12,99,354.87 ಕೋಟಿ ರೂ. ಉತ್ಪನ್ನಗಳನ್ನು ದೇಶದಿಂದ ರಫ್ತು ಮಾಡಲಾಗಿದೆ. ಅದರಲ್ಲಿ  ಉತ್ತರಪ್ರದೇಶದಿಂದ ವಿದೇಶ 72,508.14 ಕೋಟಿ ರೂ. ಉತ್ಪನ್ನಗಳನ್ನು ಕಳುಹಿಸಲಾಗಿದೆ.
ಈಗ ರಫ್ತು ವಹಿವಾಟಿನಲ್ಲಿ ಉತ್ತರಪ್ರದೇಶ ಐದನೇ ಸ್ಥಾನದಲ್ಲಿದ್ದು, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ, ದೆಹಲಿ, ಕೇರಳ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಅರುಣಾಚಲ ಪ್ರದೇಶ, ಮತ್ತು ಜಮ್ಮು ಮತ್ತು ಕಾಶ್ಮೀರ ನಂತರದ ಸ್ಥಾನದಲ್ಲಿವೆ. ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss