Sunday, June 26, 2022

Latest Posts

ಕೊರೋನಾ ಬೆನ್ನಲ್ಲೇ ರಾಜ್ಯದಲ್ಲಿ ಹೆಚ್ಚಿದೆ ಡೆಂಗ್ಯೂ, ಚಿಕೂನ್‌ಗುನ್ಯಾ

ಕೊಪ್ಪಳ: ದೇಶದಲ್ಲಿ ಕೊರೋನಾ ಭಯ ಹೆಚ್ಚಾಗುತ್ತಿರುವುದು ಒಂದಡೆಯಾದರೆ ಇತ್ತ ಕೊಪ್ಪಳ ಸೇರಿದಂತೆ ರಾಜ್ಯದಲ್ಲಿ ಡೆಂಗ್ಯೂ ಹಾಗೂ ಚಿಕೂನ್‌ಗುನ್ಯಾ ಹಾವಳಿ ಕೂಡ ಹೆಚ್ಚಾಗಿದೆ. ಬೆಂಗಳೂರು ನಗರ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಪ್ರಕರಣಗಳು ಹೆಚ್ಚು ಕಂಡುಬಂದಿದ್ದರೆ ಬೆಂಗಳೂರು ಗ್ರಾಮೀಣ ಜಿಲ್ಲೆ ಡೆಂಗ್ಯೂ- ಚಿಕೂನ್‌ಗುನ್ಯಾ ಇಲ್ಲದ ಜಿಲ್ಲೆಯಾಗಿದೆ.

ಕೊರೋನಾ ಹೇಗೆ ಒಂದು ವೈರಸ್ ರೋಗವೋ ಡೆಂಗ್ಯೂ- ಚಿಕೂಗುನ್ಯಾ ಕೂಡ ವೈರಸ್‌ನಿಂದ ಬರುವ ಸಾಂಕ್ರಾಮಿಕ ರೋಗವಾಗಿದೆ. ಕೊರೋನಾ ಸೀನು, ಕೆಮ್ಮು, ನೆಗಡಿಯಿಂದ ಬಂದರೆ ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗವಾಗಿದೆ. ಈ ಡೆಂಗ್ಯೂ ಹರಡುವ ಸೊಳ್ಳೆಗಳಿಗೆ ನಿಂತ ನೀರೇ ತವರಾಗಿದೆ. ದಿನದಿಂದ ದಿನಕ್ಕೆ ಏರುತ್ತಿರುವ ಬಿಸಿಲಿನ ತಾಪಕ್ಕೆ ವಿದ್ಯುತ್ ಹಾಗೂ ನೀರಿನ ಅಭಾವದಿಂದ ಗ್ರಾಮೀಣ ಹಾಗೂ ನಗರಗಳಲ್ಲಿ ನೀರಿನ ಸಂಗ್ರಹ ಕೂಡ ಹೆಚ್ಚಾಗುತ್ತಿದೆ. ಡೆಂಗ್ಯೂ ಸೊಳ್ಳೆಗಳಿಗೆ ನೀರಿನ ಸಂಗ್ರಹವೇ ಪೂರಕ ವಾತಾವರಣವಾಗಿದ್ದರಿಂದ ಡೆಂಗ್ಯೂ – ಚಿಕೂನ್‌ಗುನ್ಯಾ ಹೆಚ್ಚುತ್ತಾ ಸಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕೊರೋನಾಗೆ ಹೇಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲವೋ ಹಾಗೆಯೇ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಕೂಡ ನಿರ್ದಿಷ್ಟವಾದ ಚಿಕಿತ್ಸೆ ಹಾಗೂ ಲಸಿಕೆ ಇಲ್ಲ. ರೋಗದ ಲಕ್ಷಣಗಳಿಗನು ಸಾರವಾಗಿ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆಯ ಬೇಕು. ಮನೆ ಹಾಗೂ ಸುತ್ತ ಮುತ್ತ ವಾತಾವರಣದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದೇ ಡೆಂಗ್ಯೂ,ಚಿಕೂನ್ ಗುನ್ಯಾ ಬರದಂತೆ ತಡೆಯುವ ಮುಖ್ಯ ಮಾರ್ಗೋಪಾಯವಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ಇಲಾಖೆ ಕೆ.ರಮೇಶ ಹೇಳುತ್ತಾರೆ.

ಒಂದು ಕಡೆ ಕೊರೋನಾ ಭಯ ಹೆಚ್ಚುತ್ತಾ ಸಾಗಿದರೆ ಇತ್ತ ಬೇಸಿಗೆ ಬಂದಂತೆ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಹಾವಳಿ ಹೆಚ್ಚುತ್ತ ಸಾಗಿದೆ. ಆರೋಗ್ಯ ಇಲಾಖೆ ಮಾತ್ರ ಇದಕ್ಕೆ ಭಯ ಬೇಡ. ಜಾಗೃತಿ ವಹಿಸಿದರೆ ಕೊರೋನಾ, ಡೆಂಗ್ಯೂ, ಚಿಕೂನ್ ಗುನ್ಯಾದಂತಹ ರೋಗಗಳನ್ನು ತಡೆಯಲು ಸಾಧ್ಯ ಎನ್ನುತ್ತಾರೆ. ಜನರು ಕೂಡ ಜಾಗೃತಿಗೆ ಮುಂದಾಗಬೇಕಾಗಿದೆ.
-ತಿಪ್ಪನಗೌಡ ಬಿಕನಹಳ್ಳಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss