ನವದೆಹಲಿ: ಕೊರೋನಾ ಪ್ರಕರಣ ಹೆಚ್ಚುತ್ತಿರುವ ನಡುವೆಯೇ ವಿಮಾನ ಹರಾಟ ಆರಂಭಿಸಲು ಸಿದ್ಧತೆ ನಡೆದಿದೆ.
ಮೊದಲಿಗೆ ಶೇ.35 ವಿಮಾನಗಳ ಹಾರಾಟ ಆರಂಭವಾಗಲಿದ್ದು ಕೇಂದ್ರ ಸರ್ಕಾರ ಹಂತ ಹಂತವಾಗಿ ಇವುಗಳನ್ನು ವಿಸ್ತರಿಸುವ ಸುಳಿವು ನೀಡಿದೆ. ದೇಶದಲ್ಲಿ ಮೇ 25 ಎಲ್ಲಾ ದೇಶೀಯ ವಿಮಾನಗಳ ಹಾರಾಟಕ್ಕೆ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವೀಟ್ ಮಾಡಿದ್ದಾರೆ. ಇದಲ್ಲದೆ ದೇಶೀಯ ವಿಮಾನಗಳ ಹಾರಾಟ ಹಿನ್ನೆಲೆ ಎಲ್ಲಾ ದೇಶೀಯ ವಿಮಾನ ನಿಲ್ದಾಣಗಳು ಮತ್ತು ವಿಮಾನ ವಾಹಕ ನೌಕೆಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚನೆ ನೀಡಲಾಗಿದೆ.
ಜೂನ್ 1 ರಿಂದ 200 ನಾನ್ ಎಸಿ ರೈಲುಗಳ ಸಂಚಾರಕ್ಕೆ ಅವಕಾಶ ನೀಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ದೇಶೀಯ ವಿಮಾನ ಹಾರಾಟಕ್ಕೆ ಕೂಡ ಗ್ರೀನ್ ಸಿಗ್ನಲ್ ನೀಡಿದೆ.
ಮಾಸ್ಕ್, ಫೇಸ್ ಮಾಸ್ಕ್ ಕಡ್ಡಾಯ, ವಿಮಾನದೊಳಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸೀಟುಗಳ ಹಂಚಿಕೆ, ಪ್ರಯಾಣಕ್ಕೂ ಮುನ್ನ ಸ್ಯಾನಿಟೈಜಿಂಗ್, ಸ್ಕ್ರೀನಿಂಗ್, ಥರ್ಮಲ್ ಟೆಸ್ಟ್ ಮಾಡಿಸುವುದು ಕಡ್ಡಾಯವಾಗಿದೆ.