ಮಂಗಳೂರು: ಮಂಗಳೂರಿನಲ್ಲಿ ಮಂಗಳವಾರ ಕೊರೋನಾ ಸೋಂಕಿತ 70 ವರ್ಷದ ವೃದ್ಧ ಮೃತಪಟ್ಟಿದ್ದು, ಮೃತ ವ್ಯಕ್ತಿಯ ದಫನ ವೇಳೆ ಮಂಗಳೂರು ಶಾಸಕ ಯು.ಟಿ.ಖಾದರ್ ಅವರು ಪಿಪಿಇ ಕಿಟ್ ಧರಿಸದೆಯೇ ಖಬರ್ ಸ್ಥಾನದಲ್ಲಿ ಗುಂಡಿ ತೋಡಲು ಸಹಕರಿಸಿದ್ದು ಆತಂಕಮೂಡಿಸಿದೆ.
ಬೋಳಾರ ಮಸೀದಿ ಬಳಿ ಮೃತ ವ್ಯಕ್ತಿಯ ದಫನ ಪ್ರಕ್ರಿಯೆ ನಡೆದಿತ್ತು. ದಫನ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಆರೋಗ್ಯ ಇಲಾಖೆಯ ಇತರ ಎಲ್ಲಾ ಸಿಬ್ಬಂದಿಗಳೆಲ್ಲರೂ ಪಿಪಿಇ ಕಿಟ್ ಧರಿಸಿದ್ದರೆ, ಖಾದರ್ ಮಾತ್ರ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ ಪಾಲ್ಗೊಂಡಿದ್ದರು.
ಜನಪ್ರತಿನಿಧಿಯೇ ಹೀಗೆ ಮಾಡಿದರೆ ನಿಯಮಗಳು ಯಾರಿಗಾಗಿ? ಎಂಬ ಪ್ರಶ್ನೆ ಈಗ ಜನತೆಯನ್ನು ಕಾಡಲಾರಂಭಿಸಿದೆ. ಇವರಿಗೆ ಕ್ವಾರಂಟೈನ್ ನಿಯಮ ಅನ್ವಯವಾಗುವುದಿಲ್ಲವೇ? ಎಂದು ನಾಗರಿಕರು ಪ್ರಶ್ನಿಸಲಾರಂಭಿಸಿದ್ದಾರೆ.
- Advertisement -