ಹೊಸದಿಲ್ಲಿ: ವಿಶ್ವಾದ್ಯಂತ ಕೊರೋನಾ ವೈರಸ್ ಆವರಿಸಿದ್ದು, ಈಗ ಐಪಿಎಲ್ 13 ನೇ ಆವೃತ್ತಿಗೂ ಹರಡಿದೆ.
ದೇಶದಲ್ಲಿ ಕೊರೋನಾ ಭೀತಿಯಿಂದ ಐಪಿಎಲ್ ಪಂದ್ಯಾವಳಿಗಳನ್ನು ರದ್ದುಕೊಳಿಸುವ ಆಲೋಚನೆಯಲ್ಲಿತ್ತು. ಆದರೆ ಇಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ಹಾಗೂ ಟೂರ್ನಿಯ ಅಧಿಕಾರಿಗಳು ಚರ್ಚೆ ನಡೆಸಿ ಮಾ. 29ರಿಂದ ನೆಡೆಯಬೇಕಿದ್ದ ಪಂದ್ಯಗಳನ್ನು ಏಪ್ರಿಲ್ 15ಕ್ಕೆ ಮುಂದೂಡಿದ್ದಾರೆ.
ಈ ಕುರಿತು ಚರ್ಚೆ ನಡೆಸಿದ ಬಿಸಿಸಿಐ ಅಧಿಕಾರಿಗಳು ಒಂದು ವೇಳೆ ಪಂದ್ಯ ರದ್ದುಗೊಂಡರೆ ಕೋಟ್ಯಾಂತರ ರುಪಾಯಿ ನಷ್ಟವಾಗುತ್ತದೆ ಎಂದರು. ಈ ವಿಚಾರವಾಗಿ ನಾಳೆ ಆಡಳಿತ ಮಂಡಳಿ ಅಧಿಕೃತ ಮಾಹಿತಿಯನ್ನು ನೀಡಲಿದೆ.