Saturday, January 16, 2021

Latest Posts

ಕೊರೋನಾ ಭೀತಿ: ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಆಸ್ಪತ್ರೆಗೆ ದಾಖಲು

ಚೆನ್ನೈ: ತಮ್ಮ ಕಚೇರಿ ಸಿಬ್ಬಂದಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹೋಂ ಐಸೋಲೇಷನ್​ನಲ್ಲಿದ್ದ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್‌ ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಮಿಳುನಾಡು ರಾಜಭವನ ಪ್ರಕಟಣೆ ಹೊರಡಿಸಿ ರಾಜ್ಯಪಾಲರಿಗೆ ವೈದ್ಯರು 7 ದಿನಗಳ ಕಾಲ ಕ್ವಾರಂಟೈನ್​ಗೆ ಸೂಚಿದ್ದಾರೆ. ರಾಜಭವನದ ಅಧಿಕಾರಿಗಳು ಪರಿಸ್ಥಿತಿ ಅವಲೋಕಿಸುತ್ತಿದ್ದು, ಕೊರೊನಾ ಮಾರ್ಗಸೂಚಿಗಳನ್ನು ಪಾಲಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ.
ರಾಜ್ಯಪಾಲರ ಆರೋಗ್ಯವನ್ನು ವೈದ್ಯರ ತಂಡವೊಂದು ನಿರಂತರ ತಪಾಸಣೆ ಮಾಡುತ್ತಿದೆ. ಸದ್ಯ ರಾಜಭವನದ ಮೂಲಗಳ ಪ್ರಕಾರ ರಾಜ್ಯಪಾಲರು ಆರೋಗ್ಯವಾಗಿದ್ದಾರೆ ಎನ್ನಲಾಗಿದೆ.
ಒಂದು ವಾರದ ಹಿಂದೆಯಷ್ಟೇ ತಮಿಳುನಾಡು ರಾಜಭವನದ 84 ಸಿಬ್ಬಂದಿಗೆ ಕೊರೋನಾ ಪಾಸಿಟಿವ್​​ ಬಂದಿತ್ತು. ಹೀಗಾಗಿ ಜುಲೈ 29ರಿಂದ ರಾಜ್ಯಪಾಲರು ರಾಜಭವನದಲ್ಲೇ ಹೋಮ್​​ ಕ್ವಾರಂಟೈನ್​​​ಗೆ ಒಳಗಾಗಿದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!