ಪಾಂಡವಪುರ : ಕೊರೋನಾ ಭಯದಿಂದಾಗಿ ಬೀದಿಯಲ್ಲಿ ಬಿದ್ದಿದ್ದ 500 ರೂ.ಗಳ ನೋಟುಗಳನ್ನು ಯಾರೂ ಮುಟ್ಟದೇ ಗಾಭರಿಗೊಂಡ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಗಾಣಿಗರ ಬೀದಿಯಲ್ಲಿ 500 ರೂ.ಗಳ ಆರು ನೋಟುಗಳು ಬಿದ್ದಿತ್ತು. 500 ರೂ. ನೋಟುಗಳನ್ನು ನೋಡಿದ ಜನತೆ ಗಾಭರಿಗೊಂಡು ನೋಟಿನಲ್ಲಿ ಕೊರೋನಾ ವೈರಸ್ ಇರಬಹುದು. ವೈರಸ್ ಇದ್ದರೆ ನಮಗೂ ಕೊರೋನಾ ಬರುತ್ತದೆ ಎಂದು ಗಾಭರಿಗೊಂಡು ಜನತೆ ನೋಟನೇ ನೋಡುತ್ತಿದ್ದರು.
ಸುದ್ಧಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ಐ ಸುಮಾರಾಣಿ ಹಾಗೂ ಪೊಲೀಸರು ನೋಟನ್ನು ನೋಡುತ್ತಿದ್ದ ಜನರನ್ನು ಚದುರಿಸಿದರು. ಕೆಲ ಪೊಲೀಸರು ನೋಟಿನ ಮೇಲೆ ಸ್ಯಾನಿಟೈಸರ್ ಸ್ಪ್ರೇ ಮಾಡಿದರು. ನಂತರ ಪಿಎಸ್ಐ ಸುಮಾರಾಣಿ ತಮ್ಮ ಕೈಗೆ ಹ್ಯಾಂಡ್ಗ್ಲೌಸ್ ಧರಿಸಿಕೊಂಡು ೫೦೦ ರೂ.ಗಳ ನೋಟುಗಳನ್ನು ಗ್ಲೌಸ್ ಒಳಗೆ ಹಾಕಿದರು. ಹಣವನ್ನು ಯಾರಾದರೂ ಕಳೆದುಕೊಂಡಿದ್ದರೆ ಪೊಲೀಸ್ ಠಾಣೆಗೆ ಬಂದು ಪಡೆದುಕೊಳ್ಳಿ ಎಂದು ತಿಳಿಸಿ ಸ್ಥಳದಿಂದ ತೆರಳಿದರು.