Sunday, August 14, 2022

Latest Posts

ಕೊರೋನಾ ಭೀತಿ: ಮೈಲಾರ ಮಲ್ಲಣ್ಣಾ ಜಾತ್ರಾ ಮಹೋತ್ಸವ ರದ್ದು

ಹೊಸ ದಿಗಂತ ವರದಿ, ಬೀದರ:

ಜಿಲ್ಲೆಯ ಭಾಲ್ಕಿ ತಾಲೂಕಿನ ಖಾನಾಪೂರ ಗ್ರಾಮದಲ್ಲಿರುವ ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ ಖಂಡೋಬಾ ದೇವಸ್ಥಾನದಲ್ಲಿ ಡಿಸೆಂಬರ್ 20 ರಿಂದ ಜನವರಿ 20ರ ವರೆಗೆ ಜಾತ್ರಾ ಮಹೋತ್ಸವವನ್ನು ನಡೆಯುತ್ತದೆ.
ಆದರೆ, ಈ ಜಾತ್ರಾ ಮಹೋತ್ಸವಕ್ಕೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಿಂದ ಲಕ್ಷಗಟ್ಟಲೆ ಭಕ್ತಾದಿಗಳು ದೇವರ ದರ್ಶನಕ್ಕೆ ಆಗಮಿಸುತ್ತಾರೆ. ಈ ವರ್ಷ ರಾಜ್ಯದಲ್ಲಿ ಕೋವಿಡ್-19 (ಕೊರೊನಾ ವೈರಸ್) ಮಹಾಮಾರಿ ಸಾಂಕ್ರಾಮಿಕ ರೋಗದ ಕಾರಣ ಜಾತ್ರಾ ಉತ್ಸವವನ್ನು ಸರಳ ರೀತಿಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಆದ್ದರಿಂದ ನವೆಂಬರ್ 20, ಡಿಸೆಂಬರ್ 27, ಜನವರಿ 03, 10 ರಂದು ಮತ್ತು 4 ರವಿವಾರದಂದು ದೇವಸ್ಥಾನದ ಸುತ್ತ-ಮುತ್ತ ಭಕ್ತಾದಿಗಳಿಗೆ ಸುಳಿಯದಂತೆ ಮತ್ತು ಖಾಯಂ ಅಂಗಡಿಗಳು ಹಾಗೂ ಫುಟ್‍ಪಾತ್ ಅಂಗಡಿಗಳು ತೆರೆಯದಂತೆ ನಿಷೇಧಿಸಲಾಗಿದೆ.
ಶ್ರೀ ಕ್ಷೇತ್ರ ಮೈಲಾರ ಮಲ್ಲಣ್ಣಾ ಖಂಡೋಬಾ ದೇವಸ್ಥಾನದ ಜಾತ್ರಾ ಮಹೋತ್ಸವವನ್ನು ರದ್ಧುಪಡಿಸಲಾಗಿರ ಎಂದು ದೇವಸ್ಥಾನದ ಆಡಳಿತಾಧಿಕಾರಿಗಳಾದ ಬಸವಕಲ್ಯಾಣ ಉಪ ವಿಭಾಗದ ಸಹಾಯಕ ಆಯುಕ್ತರಾದ ಭುವನೇಶ ಪಾಟೀಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss