Saturday, June 25, 2022

Latest Posts

ಕೊರೋನಾ ಭೀತಿ: ಶಬರಿಮಲೆ ಭೇಟಿ ನೀಡುವ ಭಕ್ತರಲ್ಲಿರಬೇಕು ಕೋವಿಡ್​ ನೆಗೆಟಿವ್ ಸರ್ಟಿಫಿಕೇಟ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ಡಿಸೆಂಬರ್ 26 ರಿಂದ ಶಬರಿಮಲೆ ದೇವಳ ಭೇಟಿ ನೀಡುವ ಭಕ್ತರು ಕಡ್ಡಾಯವಾಗಿ ಆರ್​ಟಿ-ಪಿಸಿಆರ್​ ಪರೀಕ್ಷೆಯನ್ನೊಳಗೊಂಡ ಕೋವಿಡ್​ ನೆಗೆಟಿವ್ ಪ್ರಮಾಣ ಪತ್ರ ಹೊಂದಿರ ಬೇಕು ಎಂದು ತಿರುವಾಂಕೂರು ದೇವಸಂ ಮಂಡಳಿ (ಟಿಡಿಬಿ) ತಿಳಿಸಿದೆ.
ದೇವಾಲಯಕ್ಕೆ ಭೇಟಿ ನೀಡುವ ಭಕ್ತರು, 48 ಗಂಟೆಗಳ ಮೊದಲು ಮಾಡಿದ ಆರ್​ಟಿ-ಪಿಸಿಆರ್​ ಪರೀಕ್ಷೆಯನ್ನೊಳಗೊಂಡ ಕೋವಿಡ್​ ನೆಗೆಟಿವ್ ಪ್ರಮಾಣ ಪತ್ರ ತರಬೇಕು ಎಂದು ಟಿಡಿಬಿ ಅಧ್ಯಕ್ಷ ಎನ್. ವಾಸು ತಿಳಿಸಿದ್ದಾರೆ.
ಮಕರ ಜ್ಯೋತಿ) ಹಬ್ಬದ ಪ್ರಯುಕ್ತ ಡಿಸೆಂಬರ್​ 31 ರಿಂದ 2021 ಜನವರಿ 13 ರವರೆಗೆ ಕೋವಿಡ್​ ನೆಗೆಟಿವ್ ಪ್ರಮಾಣ ಪತ್ರ ತಂದ ಭಕ್ತರಿಗೆ ಶಬರಿಮಲೆ ಬೆಟ್ಟ ಏರಲು ಅವಕಾಶ ನೀಡಲಾಗುವುದು.
ಈ ಹಿಂದೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಆ್ಯಂಟಿಜೆನ್​ ಪರೀಕ್ಷೆ ನಡೆಸಿದ ವರದಿ ತಂದಿದ್ದರೆ ಸಾಕಿತ್ತು. ಇಂದಿನವರೆಗೆ ಪ್ರತಿದಿನ 2 ಸಾವಿರ ಭಕ್ತರ ಭೇಟಿಗೆ ಅವಕಾಶ ನೀಡಲಾಗಿತ್ತು. ಮುಂದಿನ ಸೋಮವಾರದಿಂದ ಶುಕ್ರವಾರದವರೆಗೆ 3 ಸಾವಿರ ಭಕ್ತರ ಭೇಟಿಗೆ ಅವಕಾಶ ನೀಡಲಾಗುವುದು ಎಂದು ದೇವಾಲಯ ಮಂಡಳಿ ಹೇಳಿದೆ.
ಇನ್ನು ಪ್ರತಿದಿನ 5 ಸಾವಿರ ಭಕ್ತರ ಭೇಟಿಗೆ ಅವಕಾಶ ನೀಡಿ ಕೇರಳ ಹೈಕೋರ್ಟ್ ಭಾನುವಾರ ಆದೇಶಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss