Monday, August 15, 2022

Latest Posts

ಕೊರೋನಾ ಮಧ್ಯೆಯೂ ಟ್ರಾವೆಲ್ ಮಾಡುತ್ತಿದ್ದೀರಾ? ಈ ಸಮಯದಲ್ಲಿ ಟ್ರಾವೆಲ್ ಮಾಡುವವರು ಈ 7 ಸೂತ್ರಗಳನ್ನು ಮನಸಿನಲ್ಲಿ ಇಟ್ಟುಕೊಳ್ಳಿ..

ಕೊರೋನಾ ಸಮಯದಲ್ಲಿ ಟ್ರಾವೆಲಿಂಗ್ ಎಂದರೆ ಹೆದರಿಕೊಂಡವರೇ ಹೆಚ್ಚು. ಇದೀಗ ನಿಧಾನವಾಗಿ ಜನ ಪ್ರಯಾಣ ಮಾಡುತ್ತಿದ್ದಾರೆ. ಟೂರಿಸ್ಟ್ ಪ್ಲೇಸ್‌ಗಳನ್ನು ನೋಡುತ್ತಿದ್ದಾರೆ. ಈ ಕಾಲದಲ್ಲಿ ಹಸಿರು ತಾಣಗಳನ್ನು ನೋಡಲು ಎರಡು ಕಣ್ಣುಗಳೂ ಸಾಲದ. ಆದರೆ ಕೊರೋನಾದಿಂದಾಗಿ ಯಾವುದೂ ಮೊದಲಿನ ರೀತಿ ಇಲ್ಲ. ಯಾರಾದರೂ ಜನ ಹತ್ತಿರದಲ್ಲಿ ಹಾದುಹೋದರೆ ಕೊರೋನಾ ಬಂದೇಬಿಟ್ಟಿತಾ ಎಂಬ ಚಿಂತೆ. ಇನ್ನು ಏನನ್ನೂ ಮುಟ್ಟಲಾಗುವುದಿಲ್ಲ. ಭಯ. ಇನ್ನು ತಿನ್ನಲೂ ಭಯ ಇವೆಲ್ಲದರ ನಡುವೆಯೂ ಎಷ್ಟೋ ಲಕ್ಷ ಜನ ಓಡಾಗುತ್ತಿದ್ದಾರೆ. ಆದರೆ ಅವರೆಲ್ಲ ಸೇಫ್ಟಿ ಮೆಶರ‍್ಸ್ ತೆಗೆದುಕೊಂಡಿರುತ್ತಾರೆ. ಇಲ್ಲಿದೆ ಈ ಸಮಯದಲ್ಲಿ ಪ್ರಯಾಣ ಮಾಡುವವರಿಗೆ ಟಿಪ್ಸ್..

  • ಮೊದಲು ಲಿಸ್ಟ್ ಮಾಡಿಕೊಳ್ಳಿ: ಈಗ ಹೈಜಿನಿಕ್‌ಗೆ ಇರುವ ಪ್ರಾಮುಖ್ಯತೆ ನಿಮ್ಮ ಬಟ್ಟೆ ಬರೆಗಿಲ್ಲ. ಹಾಗಾಗಿ ಬಟ್ಟೆ ಪ್ಯಾಕ್ ಮಾಡುವ ಮುನ್ನ ಸ್ಯಾನಿಟೈಸರ್, ವೈಪ್ಸ್, ಟಿಶ್ಯೂ, ಸ್ಪ್ರೇ, ಮಾಸ್ಕ್ ಇಟ್ಟುಕೊಳ್ಳಿ. ಇದು ತುಂಬಾನೇ ಮುಖ್ಯ. ಎಲ್ಲವನ್ನೂ ಎಕ್ಸ್ಟಾ ಇಟ್ಟುಕೊಳ್ಳಿ.
  • ವಸ್ತು ಮುಟ್ಟುವ ಮುನ್ನ ಯೋಚಿಸಿ: ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ನೀವು ಟ್ರಾವೆಲ್ ಮಾಡುವಾಗ ಎಷ್ಟೋ ವಸ್ತುಗಳನ್ನು ಮುಟ್ಟುತ್ತೀರಿ. ಬಸ್ ಅಥವಾ ಗಾಡಿಯ ವಿಂಡೋ, ಕಂಬಿ, ಲಿಫ್ಟ್ ಬಟನ್ಸ್, ಬಾಗಿಲು ಹೀಗೆ ವಸ್ತುಗಳನ್ನು ಮುಟ್ಟುತ್ತಲೇ ಇರುತ್ತೀರಿ. ಇನ್ನು ಶಾಪಿಂಗ್ ಹೋದರೆ ಅಲ್ಲಿ ಎಲ್ಲ ವಸ್ತುಗಳನ್ನು ಮುಟ್ಟಿಯೇ ನೋಡುತ್ತೀರಿ. ಅದನ್ನು ನಿಮ್ಮ ಹಾಗೆ ತುಂಬಾ ಜನ ಮುಟ್ಟಿ ನೋಡುತ್ತಾರೆ. ನೆನಪಿರಲಿ.
  • ಮನುಷ್ಯರಿಂದ ದೂರ: ಆದಷ್ಟು ಮನುಷ್ಯರನ್ನು ಅವಾಡ್ಡ್ ಮಾಡಿ ಟೆಕ್ನಾಲಜಿ ಬಳಸಿ, ಆಟೋ ಅಥವಾ ಕ್ಯಾಬ್ ಬೇಕಿದ್ದರೆ ಆನ್‌ಲೈನ್ ಬುಕ್ಕಿಂಗ್ ಮಾಡಿ. ಊಟ ಮಾಡುವಾಗ ಕಡಿಮೆ ರಶ್ ಇರುವ ಕಡೆ ಹೋಗಿ. ಯಾವ ಟೇಬಲ್ ಮುಟ್ಟಬೇಡಿ. ದೂರದಲ್ಲಿ ನಿಲ್ಲಿ.
  • ಕಿಟಿಕಿ ಸೀಟ್ ಇರಲಿ: ಆದಷ್ಟು ಕಿಟಕಿ ಸೀಟ್ ಪ್ರಿಫರ್ ಮಾಡಿ. ಗಾಳಿ ಆಡಲಿ. ಇನ್ನು ಸ್ವಲ್ಪ ಶೀತ ಇದ್ದು ತಮಗೆ ಕೊರೋನಾ ಇಲ್ಲ ಎಂದು ಅಂದುಕೊಳ್ಳುವವರು ಸಾಕಷ್ಟು ಜನ ಇದ್ದಾರೆ. ಅವರೇ ನಿಜವೂ ಇರಬಹುದು. ರಿಸ್ಕ್ ಯಾಕೆ? ಆ ರೀತಿ ಇರುವವರು ವಿಂಡೋ ಸೀಟ್ ನೋಡುವುದಿಲ್ಲ. ಹಾಗಾಗಿ ಅವರು ನಿಮ್ಮಿಂದ ದೂರವೇ ಇರುತ್ತಾರೆ.
  • ಕೂರುವ ಮುನ್ನ ಸ್ಪ್ರೇ ಮಾಡಿ: ಕೂರುವ ಮುನ್ನ ಸ್ಪ್ರೇ ಮಾಡಿ. ಬಸ್,ಆಟೋ,ಹೋಟೆಲ್ ಹೀಗೆ ಎಲ್ಲಿ ಕುಳಿತರೂ ಸ್ಪ್ರೇ ಮಾಡಿ. ಇಲ್ಲ ವೈಪ್ಸ್‌ನಲ್ಲಿ ಒರೆಸಿ ನಂತರ ಕುಳಿತುಕೊಳ್ಳಿ.
  • ನೀರು ಕುಡಿಯಬೇಡಿ: ಈಗಿನ ಕಾಲದಲ್ಲಿ ಹೊರಗೆ ಏನು ತಿಂದರೂ ಕುಡಿದರೂ ಕಷ್ಟವೇ. ಅದರಲ್ಲೂ ಹೊಟೆಲ್‌ಗಳಲ್ಲಿ ಕೊಡುವ ತಣ್ಣೀರು ಕುಡಿಯಬೇಡಿ. ಇನ್ನು ಕಾಫಿ,ಟೀ ಹಾಗೂ ಜ್ಯೂಸ್‌ಗೆ ಕೂಡ ಈ ನೀರನ್ನೇ ಬಳಸುತ್ತಾರೆ. ಹಾಗಾಗಿ ನೀರಿನಿಂದ ಮಾಡಿದ ಏನನ್ನೂ ಕುಡಿಯುವುದು ಅಷ್ಟು ಸೂಕ್ತವಲ್ಲ.
  • ಆರಾಮಿಲ್ಲದಿದ್ದರೆ ಮನೆಯಲ್ಲೇ ಇರಿ: ಸ್ವಲ್ಪ ಅನ್‌ಈಸಿ ಫೀಲ್ ಆದರೆ, ಹುಷಾರಿಲ್ಲ ಎಂದನಿಸದರೆ ನನಗೇನಾಗಿಲ್ಲ ಎಂದು ಹೊರಬರುವುದು ಬೇಡ. ಇದರಿಂದ ನಿಮ್ಮ ಆರೋಗ್ಯಕ್ಕೂ ತೊಂದರೆ. ಇತರರಿಗೆ ಇನ್ನೂ ತೊಂದರೆ. ನಿಮ್ಮ ಸಾಮಾಜಿಕ ಜವಾಬ್ದಾರಿ ಅರಿಯಿರಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss