Monday, July 4, 2022

Latest Posts

ಕೊರೋನಾ ಮಹಾಮಾರಿ ಅಬ್ಬರ: ಈ ಬಾರಿ ಸರಳ ದಸರಾ ಆಚರಣೆಗೆ ಚಿಂತನೆ

ಮೈಸೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಬ್ಬರಿಸುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿದೆ. ಅದರಲ್ಲೂ ಶನಿವಾರ ಒಂದೇ ದಿನ ರಾಜ್ಯದಲ್ಲಿ 918 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಹೀಗಾಗಿ ಈ ಬಾರಿಯ ದಸರಾ ಸರಳವಾಗಿ ಆಚರಿಸುವ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.
ಎಲ್ಲ ವಲಯಗಳ ಮೇಲೂ ಕೊರೊನಾ ತನ್ನ ಕರಾಳ ನೆರಳು ಬೀರಿದ್ದು, ಇದು ಈ ವರ್ಷ ನಾಡಹಬ್ಬ ಮೈಸೂರು ದಸರಾಗೂ ತಟ್ಟುವ ಸಾಧ್ಯತೆ ಇದೆ. ಕೊರೊನಾ ಸದ್ಯಕ್ಕೆ ನಿಯಂತ್ರಣಕ್ಕೆ ಬರುವ ಯಾವುದೇ ಸೂಚನೆ ಇಲ್ಲದೆ ಇರುವ ಕಾರಣ ಈ ಬಾರಿ ಸರಳ ದಸರಾ ಆಚರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತು ಮಾತನಾಡಿರುವ ಸಚಿವ ಸಿ.ಟಿ. ರವಿ, ಅಕ್ಟೋಬರ್ 17 ರಿಂದ ದಸರಾ ಆರಂಭವಾಗಬೇಕಿದೆ. ಇದಕ್ಕೆ ಇನ್ನೂ ಸಾಕಷ್ಟು ಸಮಯ ಇದೆಯಾದರೂ ಸಿದ್ಧತೆಗೆ ಕಾಲಾವಕಾಶ ಬೇಕಾಗುವ ಕಾರಣ ಈ ಬಾರಿ ಸರಳ ದಸರಾ ಆಚರಿಸುವ ಕುರಿತಂತೆ ಚರ್ಚೆ ನಡೆದಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss