ಲಂಡನ್: ಮಹಾಮಾರಿ ಕೊರೋನಾ ಸೋಂಕು ನಿವಾರಣೆಗೆ ಹೊಗೆಸೊಪ್ಪು ಔಷಧಿಯೇ? ಇದರಲ್ಲಿ ಸೋಂಕು ನಿವಾರಣೆಯ ಶಕ್ತಿ ಇದೆಯೇ??
ಶ್ವಾಸಕೋಶ ರೋಗಗಳಿಗೆ ಹೊಗೆಸೊಪ್ಪು ಸೇವನೆಯೇ ಮೂಲ ಎಂಬುದು ಎಲ್ಲ ದೇಶಗಳ ಎಲ್ಲರಿಗೂ ಗೊತ್ತಿರುವ ಸಂಗತಿ. ಬೀಡಿ, ಸಿಗರೇಟು ತಯಾರಿಕೆಗೆ ಇದುವೇ ಮೂಲವಸ್ತು. ಇಂತಹ ಹೊಗೆಸೊಪ್ಪಿನಿಂದ ಕೊರೋನಾ ಸೋಂಕು ನಿವಾರಣೆಯ ಔಷಧಿ ತಯಾರಿಸಲು ಸಾಧ್ಯ ಎಂದು ಬ್ರಿಟಿಷ್, ಅಮೆರಿಕನ್ ಸಿಗರೇಟು ಕಂಪನಿಯೊಂದು ಈಗ ಮುಂದೆ ಬಂದಿದೆ. ಹೊಗೆಸೊಪ್ಪಿನಲ್ಲಿ ಕೊರೋನಾ ಸೋಂಕು ನಿವಾರಿಸುವ ಶಕ್ತಿಶಾಲಿ ಅಂಶವಿದೆಯೆಂದೂ, ಅದನ್ನು ಈಗಾಗಲೇ ತಾನು ಪ್ರಯೋಗ ಮಾಡಿ ಸಫಲವಾಗಿರುವುದಾಗಿ ಈ ಕಂಪನಿ ಆಡಳಿತ ವರ್ಗ ಹೇಳಿದೆ. ಅಲ್ಲದೆ ತನಗೆ ಔಷಧಿ ತಯಾರಿಸಲು ಒಪ್ಪಿಗೆ ನೀಡಲು ಅಮೆರಿಕನ್ ಫೆಡರಲ್ ಅಥಾರಿಟಿಗೆ ಮನವಿ ಮಾಡಿದೆ. ಒಂದು ವೇಳೆ ತನಗೆ ಅನುಮತಿ ದೊರೆತರೆ, ಕೆಲವೇ ದಿನಗಳಲ್ಲಿ ಮೂರು ದಶಲಕ್ಷ ಲಸಿಕೆ ತಯಾರಿಸಿ ಎಲ್ಲ ದೇಶಗಳಿಗೆ ಇದನ್ನು ವಿತರಿಸಲು ತಾನು ಸಿದ್ಧಿವಿರುವುದಾಗಿ ಈ ಕಂಪನಿ ಹೇಳಿಕೆಯೊಂದನ್ನು ನೀಡಿದೆ.