Wednesday, July 6, 2022

Latest Posts

ಕೊರೋನಾ: ರಾಜ್ಯದಲ್ಲಿ 26 ಹೊಸ ಪ್ರಕರಣಗಳು ಪತ್ತೆ: 951 ಸೋಂಕಿತರು

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೋನಾಗೆ ಇಂದು ಮತ್ತೆ 26 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದೆ.  ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 951ಕ್ಕೆ ಏರಿಕೆಯಾಗಿದೆ.

ಇಂದು ಕಲಬುರಗಿಯಲ್ಲಿ 2, ಬೆಂಗಳೂರಿನಲ್ಲಿ 1, ಉತ್ತರ ಕನ್ನಡ 2, ಬಳ್ಳಾರಿ 1, ಬೀದರ್ 11, ದಾವಣಗೆರೆ 2, ವಿಜಯಪುರ 2, ದಕ್ಷಿಣ ಕನ್ನಡ 1, ಹಾಸನ 4 ಕೊರೋನಾ ಪ್ರಕರಣಗಳು ದಾಖಲಾಗಿದೆ.

ಕಲಬುರಗಿಯ 65 ವರ್ಷದ ಕೊರೋನಾ ಸೋಂಕಿತ ವ್ಯಕ್ತಿ ಪಿ.927 ಸಾವನ್ನಪ್ಪಿದ್ದು, ರಾಜ್ಯದಲ್ಲಿ ಸಾವಿನ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಈಗ ಒಟ್ಟು 951 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು, ಇವರಲ್ಲಿ 442 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss