Thursday, August 18, 2022

Latest Posts

ಕೊರೋನಾ ರೋಗವನ್ನು ದೂರವಿಡಬೇಕು, ಹೊರತು ರೋಗಿಯನ್ನಲ್ಲ: ಗವಿಮಠದ ಗವಿಸಿದ್ಧೇಶ್ವರ ಶ್ರೀ

ಕೊಪ್ಪಳ: ನಾವು ಕೊರೋನಾ ರೋಗವನ್ನು ದೂರವಿಡಬೇಕು ಹೊರತು ರೋಗಿಯನ್ನಲ್ಲ. ಆದ್ದರಿಂದ ಕೊರೋನಾ ಸೋಂಕು ಬಂದಿರುವ ರೋಗಿಗಳನ್ನು ನಿರ್ಲಕ್ಷ್ಯ ವಹಿಸದೆ ಅಥವಾ ಹೆದರದೆ ರೋಗಿಗಳಿಗೆ ಆತ್ಮ ಬಲ, ಮನೋಸ್ಥೈರ್ಯ ತುಂಬುವುದು ಕುಟುಂಬ, ನೆರೆಹೊರೆ, ಸ್ನೇಹಿತರು ಹಾಗೂ ಸಮುದಾಯದ ಕರ್ತವ್ಯವಾಗಿದೆ ಎಂದು  ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹೇಳಿದರು.
ಸಂಸ್ಥಾನ ಶ್ರೀ ಗವಿಮಠದಲ್ಲಿ ಭಕ್ತರಲ್ಲಿ ಆತ್ಮಬಲ ತುಂಬಲು ದಿವ್ಯ ಸಂದೇಶವನ್ನು ನೀಡಿದ ಪೂಜ್ಯ ಶ್ರೀಗಳು ಜಗತ್ತನ್ನೇ ಕಾಡುತ್ತಿರುವ ಕೊವಿಡ್-19 ರೋಗವು ಒಂದು ಸಾಂಕ್ರಾಮಿಕ ರೋಗವಾಗಿದ್ದು, ತನ್ನ ಜಗತ್ತಿನ ಜನರ ದೈಹಿಕ, ಮಾನಸಿಕ ಸ್ಥಿತಿಯನ್ನು ಕುಗ್ಗಿಸಿ ಜನರ ಮರಣಕ್ಕೆ ಕಾರಣವಾಗಿದೆ.
ಈ ರೋಗವು ಮಾರಾಣಾಂತಿಕ ರೋಗವಾದರು ನಮ್ಮ ವ್ಯಯಕ್ತಿಕ ಜಾಗೃತಿಯಿಂದ ಸಂರಕ್ಷಿಸಿಕೊಳ್ಳಲು ಸಾಧ್ಯವಿದೆ. ಕಾರಣ ಯಾವುದೇ ವ್ಯಕ್ತಿ ಈ ರೋಗಕ್ಕೆ ಹೆದರದೆ ಮುನ್ನಚ್ಚರಿಕೆ ಕ್ರಮಗಳನ್ನು ಅಳವಡಿಸಿಕೊಂಡರೆ ಈ ರೋಗದಿಂದ ನಾವು ದೂರ ಉಳಿಯುದರೊಂದಿಗೆ ಈ ರೋಗವನ್ನು ಮುಕ್ತವಾಗಿಸಬಹುದು.
ಆದ್ದರಿಂದ ನಾವುಗಳು ಈ ರೋಗದ ಬಗ್ಗೆ ಇರುವ ಹಲವಾರು ವದಂತಿಗಳಿಗೆ ಕಿವಿಗೊಡದೆ ಅಗತ್ಯ ಸುರಕ್ಷಾ ಕ್ರಮಗಳನ್ನು ನಾವೆಲ್ಲಾ ಪಾಲಿಸಿ ರೋಗ ಹರಡದಂತೆ ತಡೆದು ರೋಗ ಮುಕ್ತ ವಾತಾವರಣ ನಿರ್ಮಿಸಲು ಮುಂದಾಗಬೇಕು.
ಆದ್ದರಿಂದ ಕೊರೋನಾ ಕುರಿತು “ಭಯ ಬೇಡ ಜಾಗೃತಿ ಮತ್ತು ಎಚ್ಚರಿಕೆ ಇರಲಿ. ಇದರ ಕುರಿತು ತಪ್ಪು ಕಲ್ಪನೆ ಅಪಪ್ರಚಾರಗಳಿಂದ ದೂರವಿರಬೇಕು. ಸಾಮಾಜಿಕ ಸುರಕ್ಷಾ ಕ್ರಮಗಳನ್ನು ನಾವೆಲ್ಲರೂ ಕಡ್ಡಾಯವಾಗಿ ಅನುಸರಿಸಬೇಕು. ಜಿಲ್ಲೆಯ ಪ್ರತಿ ತಾಲೂಕ ಸಮುದಾಯ ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ತಪಸಣಾ ಕೇಂದ್ರಗಳಿದ್ದು ಮತ್ತು ರ್ಯಾಪಿಡ್ ಆಂಟಿಜನ್ ಟೆಸ್ಟಗಳನ್ನು ಮೋಬೈಲ್ ಯೂನಿಟಗಳ ಮೂಲಕ ತಪಾಸಣಾ ಮಾಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದ ಅವರು, ನಮ್ಮ ಜಿಲ್ಲೆಯಲ್ಲಿ ಕೊರೋನಾಕ್ಕೆ ತುತ್ತಾದ ರೋಗಿಗಳು ಗುಣಮುಖವಾಗುತ್ತಿರುವ ಪ್ರಮಾಣ ಹೆಚ್ಚಾಗಿದ್ದು, ಸಂತಸದ ವಿಷಯ. ರೋಗಿಗಳನ್ನು ನಿರ್ಲಕ್ಷ್ಯ ವಹಿಸದೆ ಅಥವಾ ಹೆದರದೆ ರೋಗಿಗಳಿಗೆ ಆತ್ಮ ಬಲ, ಮನೋಸ್ಥೈರ್ಯ ತುಂಬುವುದು ಕುಟುಂಬ, ನೆರೆಹೊರೆ, ಸ್ನೇಹಿತರು ಹಾಗೂ ಸಮುದಾಯದ ಕರ್ತವ್ಯವಾಗಿದೆ. ಈ ಸಕಾರಾತ್ಮಕ ಪ್ರೋತ್ಸಾಹದಿಂದ ರೋಗ ಪೀಡಿತ ಯಾವುದೇ ವ್ಯಕ್ತಿ ಬೇಗನೆ ಗುಣಮುಖರಾಗಬಹುದಾಗಿದೆ ಎಂದು ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!