Wednesday, June 29, 2022

Latest Posts

ಕೊರೋನಾ ರೋಗಿಗಳಿಗೆ ಕಿವಿ ಹಣ್ಣು ನೀಡುವುದೇಕೆ? ಕಿವಿ ಹಣ್ಣಿನ ಲಾಭಗಳೇನು ನೋಡಿ…

ಇತ್ತೀಚೆಗೆ ಕಿವಿ ಹಣ್ಣಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಎಲ್ಲರೂ ಎಷ್ಟೇ ದುಡ್ಡಾಗಲಿ ಕಿವಿ ತಿನ್ನುತ್ತಿದ್ದಾರೆ. ಕೊರೋನಾ ರೋಗಿಗಳಿಗೂ ಕಿವಿ ನೀಡಲಾಗುತ್ತಿದೆ. ಅಂಥದ್ದೇನಿದೆ ಕಿವಿ ಹಣ್ಣಿನಲ್ಲಿ? ಕಿವಿ ಹಣ್ಣಿನ ಬಗ್ಗೆ, ಅದರ ಲಾಭದ ಬಗ್ಗೆ ತಿಳಿಯೋಣ ಬನ್ನಿ..

  • ಅಸ್ತಮಾ: ಕಿವಿಯಲ್ಲಿ ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡೆಂಟ್ಸ್ ಇದೆ. ಇದರಿಂದ ಅಸ್ತಮಾ ಕ್ಯೂರ್ ಮಾಡಬಹುದು. ಚಿಕ್ಕಮಕ್ಕಳಲ್ಲಿ ಬರುವ ವೀಜಿಂಗ್ ಸಮಸ್ಯೆಗೂ ಅಸ್ತಮಾ ಸಹಕಾರಿಯಾಗಿದೆ.
  • ಜೀರ್ಣಕ್ರಿಯೆ: ಕಿವಿ ಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ಚೆನ್ನಾಗಿರುತ್ತದೆ. ಇದರಲ್ಲಿರುವ ಫೈಬರ್ ಗುಣ ತಿಂದ ಆಹಾರ ಜೀರ್ಣವಾಗುವಂತೆ ನೋಡಿಕೊಳ್ಳುತ್ತದೆ.
  • ಇಮ್ಯುನಿಟಿ ಹೆಚ್ಚುತ್ತದೆ: ಕಿವಿ ಹಣ್ಣಿನಲ್ಲಿರುವ ವಿಟಮಿನ್ ಸಿಯಿಂದ ಇಮ್ಯುನಿಟಿ ಹೆಚ್ಚುತ್ತದೆ. ಇಮ್ಯನಿಟಿ ಹೆಚ್ಚಲು ವಿಟಮಿನ್ ಸಿ ಅವಶ್ಯಕ. ಅದನ್ನು ಇದು ಪೂರ ಮಾಡುತ್ತದೆ. ಹಾಗಾಗಿ ವಿಟಮಿನ್ ಸಿ ಸೇವಿಸುವುದರಿಂದ ಇಮ್ಯುನಿಟಿ ಹೆಚ್ಚಿ ಕೊರೋನಾದಿಂದ ಕೂಡ ದೂರ ಇರಬಹುದು.
  • ಬಿಪಿ ಮ್ಯಾನೇಜ್: ನಮ್ಮ ರಕ್ತದೊತ್ತಡ ಕಂಟ್ರೋಲ್‌ನಲ್ಲಿರುವುದು ಕಿವಿ ಹಣ್ಣಿನ ಕೆಲಸ. ವಾರಕ್ಕೆ ಮೂರು ಬಾರಿ ಕಿವಿ ತಿನ್ನುವುದರಿಂದ ಲೋ ಬಿಪಿ ರಿಸ್ಕ್ ದೂರ ಆಗುತ್ತದೆ.
  • ಬ್ಲಡ್ ಕ್ಲಾಟ್ ಆಗುತ್ತದೆ: ದೇಹದೊಳಗೆ ರಕ್ತ ಕ್ಲಾಟ್ ಆಗದಂತೆ ಕಿವಿ ಹಣ್ಣು ಸಹಕರಿಸುತ್ತದೆ. ರಕ್ತದಲ್ಲಿ ಫ್ಯಾಟ್ ಅಂಶ ಹೆಚ್ಚು ಸೇರದಂತೆ ಕಿವಿ ನೋಡಿಕೊಳ್ಳುತ್ತದೆ.
  • ರಕ್ತ ಹೆಚ್ಚಳ: ರಕ್ತದಲ್ಲಿ ಹೆಚ್ಚು ವೈಟ್ ಬ್ಲಡ್ ಸೆಲ್ಸ್ ಇಲ್ಲದೆ ಇರುವವರಿಗೂ ಇದೆ ರಾಮಬಾಣ. ವೈಟ್ ಬ್ಲಡ್ ಸೆಲ್ಸ್ ಹೆಚ್ಚಿಸಲು ಕಿವಿ ಹಣ್ಣು ತಿನ್ನಬೇಕು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss