Friday, August 19, 2022

Latest Posts

ಕೊರೋನಾ ಲಸಿಕೆಯ ಎರಡನೇ ಡೋಸ್​ ಪಡೆದ ಇಸ್ರೇಲ್ ಪ್ರಧಾನಿ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಫಿಜರ್-ಬಯಾಂಟೆಕ್ ಕೊರೋನಾ ಲಸಿಕೆಯ ಎರಡನೇ ಡೋಸ್​ ಪಡೆದುಕೊಂಡಿದ್ದಾರೆ.
‘ರಿಟರ್ನಿಂಗ್ ಟು ಲೈಫ್’ ಅಭಿಯಾನದಡಿ ಎರಡನೇ ಡೋಸ್ ಪಡೆದುಕೊಂಡ ಪ್ರಧಾನಿ ನೆತನ್ಯಾಹು, ‘ಮುಂಬರುವ 2-3 ತಿಂಗಳಲ್ಲಿ ಎಲ್ಲಾ ಇಸ್ರೇಲಿ ನಾಗರಿಕರಿಗೂ ಲಸಿಕೆ ನೀಡಲಾಗುವುದು. ಇದು ನಮ್ಮ ಆರ್ಥಿಕತೆಯನ್ನು ಮತ್ತೆ ತೆರೆಯಲು ಸಾಧ್ಯವಾಗಿಸುತ್ತದೆ.’ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇನ್ನು ಪ್ರಧಾನಿಗೆ ಆರೋಗ್ಯ ಸಚಿವ ಯೂಲಿ ಎಡೆಲಸ್ಟೈನ್ ಸಾಥ್​ ನೀಡಿದ್ದಾರೆ. ಡಿಸೆಂಬರ್ 20 ರಂದು ಬೆಂಜಮಿನ್ ನೆತನ್ಯಾಹು ಲಸಿಕೆ ಪಡೆದ ಮೊದಲ ಇಸ್ರೇಲಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ತಿಂಗಳ ಅಂತ್ಯದ ವೇಳೆಗೆ ಲಕ್ಷಾಂತರ ಡೋಸ್​ಗಳು ಬರುತ್ತವೆ ಎಂದು ವಾಗ್ದಾನ ಮಾಡಿದ್ದರು. ಅಂತೆಯೇ ಎಲ್ಲಾ ಇಸ್ರೇಲಿಗರಿಗೂ ಲಸಿಕೆ ಹಾಕಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!