Wednesday, July 6, 2022

Latest Posts

ಕೊರೋನಾ ಲಸಿಕೆಯ ಪೂರ್ವ ಸಿದ್ಧತಾ ಪರೀಕ್ಷೆಗಾಗಿ ಮೂರು ರಾಜ್ಯಗಳನ್ನು ಆಯ್ಕೆ ಮಾಡಿದ ಕೇಂದ್ರ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಲಸಿಕೆ ದೇಶದ ಎಲ್ಲಾ ಜನರಿಗೂ ತಲುಪುವಂತೆ ಕೇಂದ್ರ ಸರಕಾರ ಈಗಾಗಲೇ ಪೂರ್ವ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಅದಕ್ಕಾಗಿ ಪೂರ್ವ ಸಿದ್ಧತಾ ಪರೀಕ್ಷೆ (ಡ್ರೈ ರನ್)ನಡೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಪರೀಕ್ಷೆಗಾಗಿ ಕೇಂದ್ರವು ಮೂರು ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿದ್ದು, ಇದರಲ್ಲಿ ತೆಲಂಗಾಣ, ಹರಿಯಾಣ ರಾಜ್ಯಗಳ ಹೆಸರು ಪರೀಕ್ಷೆಗಳಿಗಾಗಿ ದೃಢವಾದರೆ, ಉತ್ತರ ಪ್ರದೇಶ ಹಾಗೂ ಗುಜರಾತ್​ ಎರಡು ರಾಜ್ಯಗಳ ಪೈಕಿ ಒಂದನ್ನು ಇನ್ನಷ್ಟೇ ಅಂತಿಮಗೊಳಿಸಬೇಕಿದೆ.
ರಾಜ್ಯದ ಅತ್ಯಂತ ಶೀತ ಸ್ಥಳದಲ್ಲಿ ಕೋವಿಡ್ ಲಸಿಕೆಗಳನ್ನು ಸಂಗ್ರಹಿಸಲಾಗುತ್ತದೆ. ಬಳಿಕ ಅಲ್ಲಿಂದ ಲಸಿಕೆಗಳನ್ನು ಜಿಲ್ಲಾ ಮಟ್ಟದ ಶೇಖರಣಾ ಕೇಂದ್ರಕ್ಕೆ ವರ್ಗಾಯಿಸಲಾಗುತ್ತದೆ ಮತ್ತು ನಂತರ ಲಸಿಕೆ ಹಾಕುವ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತದೆ.
ಆ ಮೂಲಕ ಯಾವುದೇ ಹಂತದಲ್ಲಿ ಅಗತ್ಯವಿರುವ ಯಾವುದೇ ನಿಯಂತ್ರಣವನ್ನು ಗುರುತಿಸುವುದು ಮತ್ತು ಸರಿಪಡಿಸುವುದು ಸಾಧ್ಯವಾಗಲಿದೆ.ದೇಶಾದ್ಯಂತ ಸುಮಾರು 30 ಕೋಟಿ ಜನರಿಗೆ ಮೊದಲ ಹಂತದ ಕೋವಿಡ್ ಲಸಿಕೆ ನೀಡಲು ಕೇಂದ್ರ ಸಿದ್ಧತೆ ನಡೆಸಿದೆ.
ಸಮಗ್ರ ಸಾರ್ವತ್ರಿಕ ವ್ಯಾಕ್ಸಿನೇಷನ್ ಕಾರ್ಯಕ್ರಮ ‘ಮಿಷನ್ ರೈನ್​​​​ಬೋ’, ದಡಾರ-ರುಬೆಲ್ಲಾ (ಎಮ್ಆರ್) ಲಸಿಕೆ, ಪೋಲಿಯೋ ಇಂಜೆಕ್ಷನ್ ಇತ್ಯಾದಿಗಳನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ತೆಲಂಗಾಣವಾಗಿದ್ದು, ಈ ಹಿನ್ನೆಲೆ ತೆಲಂಗಾಣವನ್ನು ಪೂರ್ವ ಸಿದ್ಧತೆ ಪರೀಕ್ಷೆ ನಡೆಸಲು ಆಯ್ಕೆ ಮಾಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss