Thursday, July 7, 2022

Latest Posts

ಕೊರೋನಾ ಲಸಿಕೆ ಅಭಿವೃದ್ಧಿ ಪರಿಶೀಲನೆ: ಇಂದು ಮೂರು ನಗರಗಳಿಗೆ ಪ್ರಧಾನಿ ಮೋದಿ ಭೇಟಿ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂದು ಪ್ರಧಾನಿ ನರೇಂದ್ರ ಮೋದಿ ಮೂರು ವ್ಯಾಕ್ಸಿನ್ ತಯಾರಿಕಾ ಕಂಪನಿಗಳಿಗೆ ಭೇಟಿ ನೀಡಲಿದ್ದು, ಕೋವಿಡ್-19 ಲಸಿಕೆ ಉತ್ಪಾದನೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳ ಬಗ್ಗೆ ಪರಾಮರ್ಶೆ ನಡೆಸಲಿದ್ದಾರೆ.

ಒಂದೇ ದಿನ ದೇಶದ ಮೂರು ಮಹಾನಗರಗಳಿಗೆ ಖುದ್ದಾಗಿ ಮೋದಿಯವರೇ ಭೇಟಿ ನೀಡಿ ಕೊರೋನಾ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಲಿದ್ದು,ಲಸಿಕೆ ಸಂಸ್ಕರಣೆ, ಸರಬರಾಜು ಕುರಿತು ಸಂಸ್ಥೆಯ ತಜ್ಞರೊಂದಿಗೆ ಚರ್ಚಿಸಲಿದ್ದಾರೆ.

ಅವರು ಅಹಮದಾಬಾದ್ ನ ಝಿಡಸ್ ಬಯೊಟೆಕ್ ಪಾರ್ಕ್, ಹೈದರಾಬಾದ್ ನ ಭರತ್ ಬಯೋಟೆಕ್ ಮತ್ತು ಪುಣೆಯ ಸೆರಮ್ ಇನ್ಸ್ ಟಿಟ್ಯೂಟ್ ಗೆ ಭೇಟಿ ನೀಡಲಿದ್ದಾರೆ.

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss