Tuesday, June 28, 2022

Latest Posts

ಕೊರೋನಾ ಲಸಿಕೆ ಕಾರ್ಯಾರಂಭಕ್ಕೆ ಈ ರಾಜ್ಯದಲ್ಲೂ ಸಿಕ್ಕಿತು ಗ್ರೀನ್ ಸಿಗ್ನಲ್: ಮುಂದಿನ ವಾರವೇ ಡ್ರೈ ರನ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕಿನ ವಿರುದ್ಧ ಹೋರಾಡಲು ಲಸಿಕೆ ಸಿದ್ಧತೆ ಪೂರ್ಣವಾಗಿದ್ದು, ಮುಂದಿನ ವಾರ ಪಂಜಾಬ್ ನಲ್ಲಿ ಲಸಿಕೆ ಕಾರ್ಯಾಚರಣೆಯ ಪರೀಕ್ಷೆ ನಡೆಸಲಾಗುತ್ತದೆ.

ರಾಜ್ಯದ ಲುಧಿಯಾನ ಹಾಗೂ ಶಾಹೀದ್ ಭಗತ್ ಸಿಂಗ್ ನಗರಗಳ 5 ಸ್ಥಳಗಳಲ್ಲಿ ಡಿ.28 ಮತ್ತು 29ರಂದು ಡ್ರೈ ರನ್ ಮಾಡಲು ಸರ್ಕಾರ ತೀರ್ಮಾನಿಸಿದೆ. ಕೊರೋನಾ ವ್ಯಾಕ್ಸಿನ್ ನ ಕಾರ್ಯಾರಂಭಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಪಂಜಾಬ್ ನ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ತಿಳಿಸಿದ್ದಾರೆ.

ಲಸಿಕೆಯ ಕಾರ್ಯಾರಂಭದ ವೇಳೆ ಆಗಬಹುದಾದ ಅಡಚಣೆಗಳು ಹಾಗೂ ಸಾಧಕ ಬಾಧಕಗಳನ್ನು ತಡೆಯಲು ಸಾಧ್ಯವಾಗುತ್ತದೆ. ಈಗಾಗಲೇ ಆಂಧ್ರಪ್ರದೇಶ, ಅಸ್ಸಾಂ, ಗುಜರಾತ್ ಸೇರಿದಂತೆ ಅನೇಕ ರಾಜ್ಯಗಳು ಡ್ರೈ ರನ್ ಮಾಡಲು ಸಿದ್ಧವಾಗಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss