Thursday, August 18, 2022

Latest Posts

ಕೊರೋನಾ ಲಸಿಕೆ ಪಡೆದ ನಟ ಅನಂತ್ ನಾಗ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ಸೋಂಕಿನ ವಿರುದ್ಧ ಎರಡನೇ ಹಂತದ ಲಸಿಕೆ ವಿತರಣೆ ಅಭಿಯಾನ ಶುರುವಾಗಿದ್ದು, ಕನ್ನಡ ಚಿತ್ರರಂಗದಲ್ಲಿ ಎವರ್ ಗ್ರೀನ್ ನಟ ಎಂದೇ ಖ್ಯಾತರಾದ ಅನಂತ್ ನಾಗ್ ಸಹ ಕೊರೋನಾ ಲಸಿಕೆ ಪಡೆದಿದ್ದಾರೆ.
ಪತ್ನಿ ಗಾಯಿತ್ರಿಯವರ ಜೊತೆ ಅನಂತ್ ನಾಗ್ ಶೇಷಾದ್ರಿಪುರಂ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಪೋಲೋ ಆಸ್ಪತ್ರೆಯ ಹಿರಿಯ ವೈದ್ಯರು ಅನಂತ್ ನಾಗ್ ಜೊತೆ ಕೆಲ ಹೊತ್ತು ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ಈಗಾಗಲೇ ಹಿಂದಿ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ತಾರೆಯರು ಕೋವಿಡ್​ ಲಸಿಕೆ ಪಡೆದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!