ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇಂದು ದೇಶದಲ್ಲಿ ಕೊರೋನಾ ಲಸಿಕಾ ಅಭಿಯಾನ ಆರಂಭವಾಗಿದ್ದು, ಆರೋಗ್ಯ ವಲಯದಲ್ಲಿ ಕಾರ್ಯನಿರ್ವಹಿಸುವವರಿಗೆ ಲಸಿಕೆ ಹಾಕಲಾಗುತ್ತಿದೆ.ಲಸಿಕೆ ಪಡೆದವರು ಅರ್ಧ ಗಂಟೆ ವಿಶ್ರಾಂತಿ ಪಡೆಯುವಂತೆ ಆರೋಗ್ಯ ಸಚಿವಾಲಯ ಸೂಚನೆ ನೀಡಿದೆ.
ಕೊರೋನಾ ಲಸಿಕೆ ಪಡೆದವರು ತಕ್ಷಣ ಹೊರ ಹೋಗಬಾರದು. ಅರ್ಧ ಗಂಟೆ ವಿಶ್ರಾಂತಿ ಪಡೆಯಿರಿ. ಲಸಿಕೆ ದೇಹದಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಿಕೊಂಡು ನಂತರ ಹೋಗಬೇಕು ಮತ್ತು ಲಸಿಕಾ ಕೇಂದ್ರಗಲ್ಲಿ ಎಂದಿನಂತೆಯೇ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸಚಿವಾಲಯ ಸೂಚಿಸಿದೆ.
ಲಸಿಕಾ ಕೇಂದ್ರಗಳಲ್ಲಿ ಕಾಯುವಿಕೆ, ಲಸಿಕೆ ಹಾಕಿಸಿಕೊಳ್ಳುವಿಕೆ ಮತ್ತು ನಿಗಾವಹಿಸುವುದು ಈ ಮೂರು ಪ್ರಕ್ರಿಯೆ ನಡೆಯುತ್ತಿದೆ.