ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೊರೋನಾ ಲಸಿಕೆ ವಿತರಣೆಗೆ ಮೈಸೂರು ಜಿಲ್ಲಾಡಳಿತ ಸನ್ನದ್ಧ: ಡಿಹೆಚ್ ಓ ಅಮರನಾಥ್

ಹೊಸದಿಗಂತ ವರದಿ, ಮೈಸೂರು:

ಮಹಾಮಾರಿ ಕೊರೋನಾಗೆ ಲಸಿಕೆ ವಿತರಿಸಲು ಮೈಸೂರು ಜಿಲ್ಲಾಡಳಿತ ಸನ್ನದ್ಧವಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಅಂತಿಮ ಹಂತದ ಸಿದ್ಧತೆ ನಡೆಸಲಾಗಿದೆ. ಈಗಾಗಲೇ ಲಸಿಕೆಗಳನ್ನು ತಾಲ್ಲೂಕುವಾರು ಕೇಂದ್ರಗಳಿಗೆ ರವಾನಿಸುವ ಕೆಲಸದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು ನಿರತರಾಗಿದ್ಧಾರೆ.

ಈ ಕುರಿತು ಮಾತನಾಡಿದ ಡಿಹೆಚ್ ಓ ಅಮರನಾಥ್, ಈಗಾಗಲೇ ನಮ್ಮಲ್ಲಿ 20,000 ಡೋಸ್ ಗಳ ಲಸಿಕೆ ಲಭ್ಯವಿದೆ. ಒಟ್ಟು 33,000 ಡೋಸ್ ಲಸಿಕೆಗಳ ಅವಶ್ಯಕತೆ ಇದೆ. ಉಳಿಕೆ ಡೋಸ್ ಗಳ ಪೂರೈಕೆಗೆ ಈಗಾಗಲೇ ಮನವಿ ಸಲ್ಲಿಸಲು ಸಿದ್ಧತೆ ನಡೆಸಲಾಗಿದೆ. ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಲು ಸರ್ಕಾರ ಸೂಚನೆ ನೀಡಿದೆ. ಅವಶ್ಯಕತೆ ಇರುವ ಎಲ್ಲಾ ಆರೋಗ್ಯ ಸಿಬ್ಬಂದಿಗೆ ಹುದ್ದೆಯ ತಾರತಮ್ಯ ಮಾಡದೇ ಲಸಿಕೆ ನೀಡಲಾಗುವುದು ಎಂದರು.

ಆರೋಗ್ಯ ಕಾರ್ಯಕರ್ತರ ಬಳಿಕ ಎರಡನೇ ಹಂತದಲ್ಲಿ ಪೊಲೀಸರು, ಪೌರಕಾರ್ಮಿಕರು ಸೇರಿದಂತೆ ಮುಂಚೂಣಿ ಕೊರೊನಾ ವಾರಿಯರ್ಸ್ ಗಳಿಗೆ ಲಸಿಕೆ ನೀಡಲಾಗುವುದು. ನಂತರ ಸರ್ಕಾರದ ಆದೇಶ ಹಾಗೂ ಸೂಚನೆ ಪ್ರಕಾರವಾಗಿ ಸಾರ್ವಜನಿಕರಿಗೆ ಲಸಿಕೆ ಲಭ್ಯವಾಗಲಿದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss