Sunday, June 26, 2022

Latest Posts

ಕೊರೋನಾ ಲಸಿಕೆ ಹೆಸರಿನಲ್ಲಿ ಮೋಸ ಮಾಡುವರಿದ್ದಾರೆ ಎಚ್ಚರ ಎಚ್ಚರ ಎಚ್ಚರ!

ಹೊಸ ದಿಗಂತ ಆನ್ ಲೈನ್ ಡೆಸ್ಕ್

ಜಗತ್ತಿನಾದ್ಯಂತ ಬ್ರಿಟನ್‌ನಲ್ಲಿ ರೂಪಾಂತರ ಪಡೆದಿರುವ ಕೊರೋನಾ ಕುರಿತು ಭೀತಿ ಮೂಡಿದ್ದರೆ, ಮತ್ತೊಂದೆಡೆ ಭಾರತದಲ್ಲಿ ಕೆಲವೇ ದಿನಗಳಲ್ಲಿ ಸೋಂಕಿಗೆ ಲಸಿಕೆ ಸಿಗಲಿದೆ ಎಂಬ ಆಶಾ ಭಾವ ಇದೆ. ಇದೇ ಆಶಾಭಾವವನ್ನು ಕೆಲವು ಸೈಬರ್ ಕಳ್ಳರು ದುರುಪಯೋಗಪಡಿಸಿಕೊಳ್ಳುತ್ತಿದ್ದು, ಕೊರೋನಾಗೆ ಲಸಿಕೆ ಬಂದಿದೆ, ನೋಂದಣಿ ಮಾಡಿಸಿಕೊಳ್ಳಿ, ಬ್ಯಾಂಕ್ ಖಾತೆ ಸೇರಿ ಹಲವು ಮಾಹಿತಿ ನೀಡಿ ಎಂದು ಕರೆ ಮಾಡುತ್ತಿದ್ದಾರೆ. ಇದು ಕೊರೋನಾದಷ್ಟೇ ಅಪಾಯಕಾರಿಯಾಗಿದ್ದು, ಜನ ಎಚ್ಚರಿಕೆಯಿಂದ ಇರುವುದು ಅನಿವಾರ್ಯವಾಗಿದೆ.
ಯಾವ ರೀತಿ ವಂಚನೆ?
ಬ್ರಿಟನ್, ಅಮೆರಿಕ ಹಾಗೂ ರಷ್ಯಾದಲ್ಲಿ ಈಗಾಗಲೇ ಜನರಿಗೆ ಲಸಿಕೆ ವಿತರಣೆ ಮಾಡಲಾಗುತ್ತಿದೆ. ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಲಸಿಕೆ ವಿತರಣೆಯಾಗಲಿದ್ದು, ಇದಕ್ಕಾಗಿ ಸರ್ಕಾರಗಳು ಸಿದ್ಧತೆ ನಡೆಸಿವೆ. ಆದರೆ, ಇನ್ನೂ ಲಸಿಕೆ ಜನರ ಕೈಸೇರಿಲ್ಲದ ಕಾರಣ ವಂಚಕರು ಗ್ರಾಹಕರಿಗೆ ಕರೆ ಮಾಡಿ ಲಸಿಕೆಗೆ ಹೆಸರು ನೋಂದಣಿ ಮಾಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ವಿದೇಶದಲ್ಲಿ ಈಗಾಗಲೇ ಲಸಿಕೆ ವಿತರಣೆ ಆರಂಭವಾಗಿದ್ದು, ಇದನ್ನು ಮೊದಲೇ ಬುಕ್ ಮಾಡಿ ತರಿಸಿಕೊಳ್ಳಬೇಕು, ಇದಕ್ಕಾಗಿ ಹಣ ಕೊಟ್ಟು ನೋಂದಣಿ ಮಾಡಿಸಿಕೊಳ್ಳಿ ಎಂದು ಮನವಿ ಮಾಡುತ್ತಿದ್ದಾರೆ.
ನೀಡಿರುವ ದೂರಿನಲ್ಲಿ ಏನಿದೆ?
ಭೋಪಾಲ್ ಮೂಲದ ಉದ್ಯಮಿಯೊಬ್ಬರು ಸೈಬರ್ ಪೊಲೀಸರಿಗೆ ದೂರು ನೀಡಿದ್ದು, ಅನಾಮಧೇಯ ವ್ಯಕ್ತಿಗಳಿಂದ ಕರೆ ಮಾಡಿ, 500 ರೂ. ಕೊಟ್ಟು ನೋಂದಣಿ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ ಎಂಬುದಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಲಸಿಕೆ ಇನ್ನೂ ಭಾರತಕ್ಕೆ ಬಂದಿರದ ಕಾರಣ ಈಗಲೇ 500 ರೂ. ಪಾವತಿಸಿ ನೋಂದಣಿ ಮಾಡಿಸಿಕೊಳ್ಳಿ. ಇಲ್ಲದಿದ್ದರೆ ಲಸಿಕೆ ಬಂದಾಗ ನೋಂದಣಿಗೇ ಸಾವಿರಾರು ರೂ. ಖರ್ಚು ಮಾಡಬೇಕಾಗುತ್ತದೆ ಎಂಬುದಾಗಿ ಕರೆ ಮಾಡಿದ್ದರು ಎಂದು ಉದ್ಯಮಿ ದೂರಿನಲ್ಲಿ ತಿಳಿಸಿದ್ದಾರೆ. ಅನಾಮಧೇಯರಿಂದ ಕರೆ ಮಾಡಿದಾಗ ಪ್ರಜ್ಞೆ ಮೆರೆದ ಉದ್ಯಮಿಯು ಯಾವುದೇ ಮಾಹಿತಿ ನೀಡಿಲ್ಲ. ಆದರೂ, ಕೂಡಲೇ ಅವರ ಮೊಬೈಲ್‌ಗೆ ಒಟಿಪಿಯೊಂದು ಬಂದಿದ್ದು, ಮತ್ತೆ ಕರೆ ಮಾಡಿ ಅದನ್ನು ಹೇಳುವಂತೆ ಒತ್ತಾಯಿಸಿದ್ದಾರೆ. ಕೂಡಲೇ ಉದ್ಯಮಿ ಪೊಲೀಸರ ಬಳಿ ತೆರಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss